×
Ad

​ಅ.10ಕ್ಕೆ ರಂಗಭೂಮಿಯ ವಿಶೇಷ ಮಹಾಸಭೆ

Update: 2021-09-29 18:43 IST

ಉಡುಪಿ, ಸೆ.29: ಉಡುಪಿಯಲ್ಲಿ 1965ರಲ್ಲಿ ಆರಂಭವಾದ ರಂಗಭೂಮಿ (ರಿ.) ಉಡುಪಿ ಸಂಸ್ಥೆಯ ನಿಯಮ ಹಾಗೂ ನಿಬಂಧನೆಗಳನ್ನು ಕರ್ನಾಟಕ ಸಂಘಗಳ ನೋಂದಣಿ ಕಾಯಿದೆ 1960ರ ಪ್ರಕಾರ ತಿದ್ದುಪಡಿಗೆ ಅಳವಡಿಸುವುದು ಅಗತ್ಯ ಮತ್ತು ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ವಿಶೇಷ ಮಹಾಸಭೆಯನ್ನು ಅ.10ರ ರವಿವಾರ ಬೆಳಗ್ಗೆ 10:30ಕ್ಕೆ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಕರೆಯಲಾಗಿದೆ.

ರಂಗಭೂಮಿ ಸಂಸ್ಥೆಯ ಎಲ್ಲಾ ಸದಸ್ಯರು ವಿಶೇಷ ಮಹಾ ಸಭೆಗೆ ಹಾಜರಾಗುವಂತೆ ಕಾರ್ಯಕಾರಿ ಮಂಡಳಿ ವಿನಂತಿಸಿದೆ ಎಂದು ರಂಗಭೂಮಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News