×
Ad

ಯುವಕ ನಾಪತ್ತೆ

Update: 2021-09-29 22:07 IST

ಉಡುಪಿ, ಸೆ.29: ಬ್ರಹ್ಮಾವರ ತಾಲೂಕಿನ ಹವರಾಲು ಕಾವಾಡಿ ಗ್ರಾಮದ ನಿವಾಸಿ ಸುಕುಮಾರ (22) ಎಂಬವರು 2019ರ ಡಿ.1ರ ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋದವರು ಮನೆಗೆ ಬಾರದೆ ಕಾಣೆಯಾಗಿದ್ದಾರೆ.

ಚಹರೆ: 5.8 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದಪ್ಪ ಶರೀರ, ದುಂಡು ಮುಖ, ಸೊಂಟದ ಎಡಬದಿ ಹಳೆಯ ಸುಟ್ಟಗಾಯ, ಎದುರಿನ ಹಲ್ಲು ಅರ್ಧ ಮುರಿದಿರುತ್ತದೆ. ಕನ್ನಡ ಭಾಷೆ ಮಾತನಾಡುತ್ತಾರೆ ಕೆಂಪು ಬಣ್ಣದ ಟಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದಾರೆ.

ಈ ವ್ಯಕ್ತಿ ಪತ್ತೆಯಾಗಿದ್ದಲ್ಲಿ ಕೋಟ ಪೋಲಿಸ್ ಠಾಣೆ ದೂ.ಸಂ: 0820- 2564155, 9480805454 ಹಾಗೂ ಪೋಲಿಸ್ ವೃತ್ತ ನಿರೀಕ್ಷಕರ ಕಛೇರಿ ದೂ.ಸಂ: 0820-2561966, 9480805432ನ್ನು ಸಂಪರ್ಕಿಸುವಂತೆ ಕೋಟ ಪೋಲಿಸ್ ಉಪ ನಿರೀಕ್ಷಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News