ಲಿಬಿಯಾದಲ್ಲಿ ವಿರೋಧಿಗಳಿಗೆ ನೆರವಾಗುವ ವಿದೇಶೀಯರ ಮೇಲೆ ನಿರ್ಬಂಧ: ಮಸೂದೆ ಅಂಗೀಕರಿಸಿದ ಅಮೆರಿಕ‌

Update: 2021-09-29 18:06 GMT

ವಾಷಿಂಗ್ಟನ್, ಸೆ.29: ಲಿಬಿಯಾದಲ್ಲಿ ವಿರೋಧಿ ಬಣಗಳಿಗೆ ನೆರವಾಗುತ್ತಿರುವ ವಿದೇಶಿ ವ್ಯಕ್ತಿಗಳ ಮೇಲೆ ನಿರ್ಬಂಧ ವಿಧಿಸಲು ಅವಕಾಶ ನೀಡುವ ವಿದೇಯಕಕ್ಕೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ ಅನುಮೋದನೆ ನೀಡಿದೆ.
ಡೆಮೊಕ್ರಟ್ ಸದಸ್ಯ ಟೆಡ್ ಡ್ಯೂಚ್ ಮತ್ತು ರಿಪಬ್ಲಿಕನ್ ಸದಸ್ಯ ಜೋ ವಿಲ್ಸನ್ ಮಂಡಿಸಿದ ಲಿಬಿಯಾ ಸ್ಥಿರೀಕರಣ ಕಾಯ್ದೆಗೆ ಮಂಗಳವಾರ ಸದನದಲ್ಲಿ 386-35 ಮತಗಳಿಂದ ಅನುಮೋದನೆ ದೊರಕಿದೆ. ಈ ವಿಧೇಯಕದ ಪ್ರಕಾರ ‘ಲಿಬಿಯಾದಲ್ಲಿ ವಿದೇಶಿ ಸರಕಾರಗಳ ಕೈವಾಡಕ್ಕೆ ನೆರವಾಗುವ, ನಿರ್ದೇಶಿಸುವ ಅಥವಾ ಇಂತಹ ಕೃತ್ಯಗಳನ್ನು ಮುನ್ನಡೆಸುವ ವ್ಯಕ್ತಿಗಳು, ಲಿಬಿಯಾದ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆ ಒಡ್ಡುವ ವಿದೇಶಿಯರು, ಲಿಬಿಯಾದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಮಾನವ ಹಕ್ಕುಗಳ ಸಮಗ್ರ ಉಲ್ಲಂಘನೆಗೆ ಹೊಣೆಗಾರರಾಗಿರುವ ವಿದೇಶಿ ವ್ಯಕ್ತಿಗಳ ಮೇಲೆ ’ ನಿರ್ಬಂಧ ವಿಧಿಸಬಹುದಾಗಿದೆ.
ಲಿಬಿಯಾದ ಟೊಬ್ರಕ್ ಪ್ರಾಂತ್ಯದ ಆಡಳಿತಕ್ಕೆ ನಿಷ್ಟವಾಗಿರುವ ಪಡೆಗಳಿಗೆ ಅಥವಾ ಟ್ರಿಪೋಲಿ ಪ್ರಾಂತ್ಯದ ಪಡೆಗಳಿಗೆ ಬೆಂಬಲ ನೀಡುವ ವಿದೇಶಿಯರಿಗೆ ಕೂಡಾ ನಿರ್ಬಂಧ ವಿಧಿಸಲು ಈ ವಿಧೇಯಕದಲ್ಲಿ ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News