×
Ad

ಬಿಐಟಿ: ಎನ್‌ಇಪಿ ಅನುಷ್ಠಾನ-ಸವಾಲುಗಳು ಕುರಿತು ಬೋಧಕರಿಗೆ ಮಾಹಿತಿ ಕಾರ್ಯಕ್ರಮ

Update: 2021-09-30 23:43 IST

ಮಂಗಳೂರು, ಸೆ.30: ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯಲ್ಲಿ ಹೊಸದಿಲ್ಲಿಯ ಐಎಸ್‌ಟಿಇ ಪ್ರಾಯೋಜಕತ್ವದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020( ಎನ್‌ಇಪಿ)ಯ ಕುರಿತು ಸೆ.27ರಿಂದ 29 ರವರೆಗೆ ಬೋಧಕರಿಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ಮೊದಲ ಅಧಿವೇಶನದಲ್ಲಿ ‘ಎನ್‌ಇಪಿ ಪ್ರಯೋಜನಗಳು ಮತ್ತು ನ್ಯೂನತೆಗಳ ಪರಿಚಯ’ ಎಂಬ ವಿಷಯದ ಕುರಿತು ಮಾತನಾಡಿದ ದಿಲ್ಲಿಯ ಜೆಎನ್‌ಯು ಮಾಜಿ ಪ್ರಾಧ್ಯಾಪಕ ಡಾ. ವಲೇರಿಯನ್ ರೊಡ್ರಿಗಸ್, ಆರ್ಥಿಕ ಬೆಳವಣಿಗೆ, ಸಾಮಾಜಿಕ ನ್ಯಾಯ ಮತ್ತು ಸಮಾನತೆ, ವೈಜ್ಞಾನಿಕ ಪ್ರಗತಿ, ರಾಷ್ಟ್ರೀಯ ಏಕೀಕರಣ ಮತ್ತು ಸಾಂಸ್ಕೃತಿಕ ಸಂರಕ್ಷಣೆ ಶಿಕ್ಷಣದ ಗುರಿಯಾಗಿದೆ. ಎನ್‌ಇಪಿ ಈ ಗುರಿ ಸಾಧನೆಗೆ ಪೂರಕವಾಗಿದೆ ಎಂದರು.

ಎರಡನೇ ಅಧಿವೇಶನದಲ್ಲಿ ಐಎಸ್‌ಟಿಇ ಕರ್ನಾಟಕದ ಅಧ್ಯಕ್ಷ ಮತ್ತು ಸಿಐಟಿ ಸಮೂಹ ಸಂಸ್ಥೆಯ ನಿರ್ದೇಶಕ ಸುರೇಶ್ ಡಿ.ಎಸ್. ಅವರು ಎನ್‌ಇಪಿ- 2020ರ ಅವಲೋಕನ ಮಾಡಿದರು. ಎರಡನೇ ದಿನ, 3ನೇ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಮಣಿಪಾಲದ ಎಂಐಟಿಯ ಕಂಪ್ಯೂಟರ್ ಅಪ್ಲಿಕೇಷನ್‌ನ ಎಚ್‌ಒಡಿ ಡಾ. ಕರುಣಾಕರ್ ಕೋಟೆಗಾರ್, ಎನ್‌ಇಪಿ ಮತ್ತು ಮರು-ಕಲ್ಪನೆಯ ವೃತ್ತಿಪರ ಶಿಕ್ಷಣವನ್ನು ಕಲ್ಪಿಸಲು ಪ್ರೇರಣೆ, ಶಕ್ತಿಶಾಲಿ ಮತ್ತು ಸಮರ್ಥ ಅಧ್ಯಾಪಕರ ಅಗತ್ಯತೆಯನ್ನು ಒತ್ತಿ ಹೇಳಿದರು.

ಎರಡನೇ ದಿನ, ನಾಲ್ಕನೇ ಅಧಿವೇಶನದಲ್ಲಿ ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಡಾ.ಅಬ್ದುಲ್ ಖಾದರ್ ಎ.ಎ. ಬೋಧನೆಯ ಪ್ರಕಾರಗಳು ಮತ್ತು ಬೋಧನೆಯ ಮೂಲ ತ್ವಗಳ ಕುರಿತು ಭಾಷಣ ಮಾಡಿದರು.

ಕೊನೆಯ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅರ್ಪಿತ ಅಸೋಸಿಯೇಟ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಜೆ.ಎಂ. ಸಂಪತ್, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಮಟ್ಟವನ್ನು ತರಲು ಚಟುವಟಿಕೆ ಆಧಾರಿತ ಕಲಿಕಾ ಅಧಿವೇಶನಕ್ಕೆ ಒತ್ತು ನೀಡಿ ಶಿಕ್ಷಕರು ಉತ್ತಮ ಸಂವಹನ, ಪ್ರೇರಣೆ ಮತ್ತು ಉಪಕ್ರಮ, ವಿಶ್ವಾಸಾರ್ಹತೆ, ತಂಡದ ಕೆಲಸ, ತಾಳ್ಮೆ ಮತ್ತು ಹೊಂದಿಕೊಳ್ಳುವಿಕೆಯ ಮೇಲೆ ಗಮನಹರಿಸಬೇಕು ಎಂದರು.

ಮೂರು ದಿನಗಳ ಕಾರ್ಯಕ್ರಮದಲ್ಲಿ ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಮತ್ತು ಡಿಪ್ಲೊಮಾದ ಬೋಧನೆ ಮತ್ತು ಬೋಧಕೇತರ ವರ್ಗದವರು ಭಾಗವಹಿಸಿದ್ದರು. ಬಿಐಟಿ ಪ್ರಾಂಶುಪಾಲ ಡಾ.ಎಸ್.ಐ ಮಂಜೂರ್ ಬಾಷಾ ಸ್ವಾಗತಿಸಿದರು. ಬೀಡ್ಸ್‌ನ ಪ್ರಿನ್ಸಿಪಾಲ್ ಅಶೋಕ್ ಎಲ್.ಪಿ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News