×
Ad

ಕೆಸಿಸಿಐ ನೂತನ ಅಧ್ಯಕ್ಷರಾಗಿ ಶಶಿಧರ್ ಪೈ ಮರೂರ್ ಆಯ್ಕೆ

Update: 2021-10-01 17:51 IST

ಮಂಗಳೂರು, ಅ.1: ಕೆನರಾ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ (ಕೆಸಿಸಿಐ) ನೂತನ ಅಧ್ಯಕ್ಷರಾಗಿ ಶಶಿಧರ್ ಪೈ ಮರೂರ್ ಆಯ್ಕೆಯಾಗಿದ್ದಾರೆ.

ನಗರದ ಕೆಸಿಸಿಐ ಕಚೇರಿಯಲ್ಲಿ ನಡೆದ 81ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು, ನಿರ್ದೇಶಕರು ಹಾಗೂ ಪದಾಧಿಕಾರಿಗಳ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಆಯ್ಕೆಗೊಂಡ ನೂತನ ಮಂಡಳಿಯು ಒಂದು ವರ್ಷದವರೆಗೆ (2021-22) ಕಾರ್ಯಾಚರಿಸಲಿದೆ. ಕೆಸಿಸಿಐನ ಉಪಾಧ್ಯಕ್ಷರಾಗಿ ಎಂ.ಗಣೇಶ್ ಕಾಮತ್, ಗೌರವ ಖಜಾಂಚಿಯಾಗಿ ಅಬ್ದುಲ್ ರಹ್ಮಾನ್ ಮುಸ್ಬಾ, ಗೌರವ ಕಾರ್ಯದರ್ಶಿಗಳಾಗಿ ನಿಸಾರ್ ಫಕೀರ್ ಮುಹಮ್ಮದ್ ಹಾಗೂ ಅನಂತೇಶ್ ವಿ. ಪ್ರಭು ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ದಿವಾಕರ್ ಪೈ ಕೊಚಿಕರ್, ನಿಟ್ಟೆ ಯತಿರಾಜ್ ಶೆಟ್ಟಿ, ಬಿ.ಎ. ನಝೀರ್, ಅಮಿತ್ ರಾಮಚಂದ್ರ, ಆದಿತ್ಯ ಪದ್ಮನಾಭ ಪೈ, ಪಿ.ಬಿ. ಅಹ್ಮದ್ ಮುದಸ್ಸಿರ್, ಆತ್ಮಿಕಾ ಅಮಿನ್, ಆನಂದ್ ಜಿ. ಪೈ, ಜೀತನ್ ಅಲೆನ್ ಸಿಕ್ವೇರಾ, ನಂದಗೋಪಾಲ ಶೆಣೈ, ಆಶಿತ್ ಬಿ. ಹೆಗ್ಡೆ, ವಿನ್ಸೆಂಟ್ ಕುಟಿನ್ಹ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News