ಭಾರತಕ್ಕೆ ಬರುವ ಇಂಗ್ಲೆಂಡ್ ನಾಗರಿಕರಿಗೆ 10 ದಿನಗಳ ಕ್ವಾರಂಟೈನ್ ಕಡ್ಡಾಯ: ವರದಿ

Update: 2021-10-01 13:09 GMT

ಹೊಸದಿಲ್ಲಿ: ಸೋಮವಾರದಿಂದ ಭಾರತಕ್ಕೆ ಆಗಮಿಸುವ ಎಲ್ಲಾ  ಇಂಗ್ಲೆಂಡ್ ನಾಗರಿಕರು ಲಸಿಕೆಯ ಸ್ಥಿತಿಯನ್ನು ಲೆಕ್ಕಿಸದೆ ಕಡ್ಡಾಯವಾಗಿ 10 ದಿನಗಳ ಸಂಪರ್ಕ ತಡೆ(ಕ್ವಾರಂಟೈನ್) ಎದುರಿಸಬೇಕಾಗುತ್ತದೆ ಎಂದು ಸರಕಾರದ ಮೂಲಗಳು NDTVಗೆ ತಿಳಿಸಿವೆ.  

"ಅಕ್ಟೋಬರ್ 4 ರಿಂದ ಇಂಗ್ಲೆಂಡ್ ನಿಂದ ಭಾರತಕ್ಕೆ ಬರುವ ಎಲ್ಲಾ ಬ್ರಿಟನ್ ಪ್ರಜೆಗಳು ಅವರ ಲಸಿಕೆ ಸ್ಥಿತಿಯ ಹೊರತಾಗಿಯೂ ಪ್ರಯಾಣಕ್ಕೆ 72 ಗಂಟೆಗಳ ಒಳಗೆ ಮೂರು ಕೋವಿಡ್ -19 ಆರ್ ಟಿ-ಪಿಸಿಆರ್ ಪರೀಕ್ಷೆಗಳನ್ನು ಕೈಗೊಳ್ಳಬೇಕಾಗುತ್ತದೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ ಕೋವಿಡ್-19 ಆರ್ ಟಿ-ಪಿಸಿಆರ್ ಟೆಸ್ಟ್ ಗೆ ಒಳಗಾಗಬೇಕಾಗುತ್ತದೆ. ಆಗಮನದ 8 ನೇ ದಿನದ ನಂತರ ಕೋವಿಡ್-19 ಆರ್ ಟಿ-ಪಿಸಿಆರ್ ಟೆಸ್ಟ್ ಗೆ ಒಳಗಾಗಬೇಕು. ಭಾರತಕ್ಕೆ ಬಂದ ನಂತರ 10 ದಿನಗಳವರೆಗೆ ಮನೆಯಲ್ಲಿ ಅಥವಾ ಗಮ್ಯಸ್ಥಾನದ ವಿಳಾಸದಲ್ಲಿ ಕಡ್ಡಾಯವಾಗಿ ಸಂಪರ್ಕ ತಡೆಯನ್ನು ಮಾಡಲಾಗುವುದು"ಎಂದು ಮೂಲಗಳು ತಿಳಿಸಿವೆ.

ಆರೋಗ್ಯ ಸಚಿವಾಲಯ ಹಾಗೂ  ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ಹೊಸ ಕ್ರಮಗಳನ್ನು ಜಾರಿಗೆ ತರಲು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News