ಪೆರ್ಡೂರು ಅಧ್ಯಕ್ಷರ ನಡವಳಿಕೆಯಿಂದ ಅಭಿವೃದ್ಧಿ ಕುಂಠಿತ: 15 ಮಂದಿ ಸದಸ್ಯರಿಂದ ಆರೋಪ

Update: 2021-10-01 15:29 GMT

ಪೆರ್ಡೂರು, ಅ.1: ಪೆರ್ಡೂರು ಗ್ರಾಪಂ ಅಧ್ಯಕ್ಷರ ನಡವಳಿಕೆಯಿಂದ ಗ್ರಾಮ ದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಗ್ರಾಪಂ ಉಪಾಧ್ಯಕ್ಷೆ ಚೇತನ ಶೆಟ್ಟಿ ಸೇರಿದಂತೆ 15 ಮಂದಿ ಗ್ರಾಪಂ ಸದಸ್ಯರು ಆರೋಪಿಸಿದ್ದಾರೆ.

ಈ ಬಗ್ಗೆ ಪೆರ್ಡೂರಿನಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ 9/11 ಸಮಸ್ಯೆ, ಕಟ್ಟಡ ಪರವಾನಿಗೆ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿಂದ ಗಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಪ್ರತಿದಿನ ಗ್ರಾಪಂ ಕಚೇರಿಗೆ ಅಲೆದಾಡು ತ್ತಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಳು ನಡೆಯುತ್ತಿಲ್ಲ ಎಂದರು.

ತಿಂಗಳಿಗೊಮ್ಮೆ ನಡೆಯುತ್ತಿದ್ದ ಸಾಮಾನ್ಯ ಸಭೆ ಕೂಡ ಸರಿಯಾಗಿ ನಡೆಯುತ್ತಿಲ್ಲ. ಈ ವಿಚಾರದಲ್ಲಿ ರಾಜ್ಯ ಸರಕಾರ ಯಾವುದೇ ರಾಜಕೀಯ ಮಾಡದೆ ಜನರ ಪರವಾಗಿ ನಿಲ್ಲಬೇಕು. ಗ್ರಾಮದ ಜನರು ಯಾವುದೇ ತಪ್ಪುಮಾಡದೇ ಇದ್ದರೂ ಈ ರೀತಿಯಲ್ಲಿ ಶಿಕ್ಷೆ ಅನುಭವಿಸುವಂತಾಗಿದೆ ಎಂದು ಅವರು ದೂರಿದರು.

ಈಗಾಗಲೇ ಅಧ್ಯಕ್ಷರ ಬೇಜಾಬ್ದಾರಿತನದ ನಡುವಳಿಕೆಯಿಂದಾಗಿ ಅವರ ಮತ್ತು ಮೂವರು ಸದಸ್ಯರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಇನ್ನು ಕೂಡ ಅವರ ಜಾಮೀನು ದೊರೆತಿಲ್ಲ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಾಗಿದ್ದ ಸುಮನ ಅವರನ್ನು ಸುಳ್ಳು ಪ್ರಕರಣ ದಲ್ಲಿ ಸಿಲುಕಿಸಿ ವರ್ಗಾವಣೆ ಗೊಳಿಸಿ ಗ್ರಾಮದ ಅಭಿವೃದ್ಧಿ ತೊಡಕು ಉಂಟು ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ರಮೇಶ್ ಪೂಜಾರಿ, ದಿನೇಶ್ ಪೂಜಾರಿ, ಸಂತೋಷ್ ಕುಲಾಲ್, ನವೀನ್, ಉದಯಕುಮಾರ್, ಶಾಂತ ರೈ,ಗಾಯತ್ರಿ, ಶೋಭಾ, ರಾಘವೇಂದ್ರ, ಸತೀಶ್ ನಾಯ್ಕ್, ದಯಾನಂದ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News