×
Ad

ಮೆಸ್ಕಾಂ ಸಿಬ್ಬಂದಿಗೆ ನಿಂದನೆ, ಬೆದರಿಕೆ: ಆರೋಪಿ ಬಂಧನ

Update: 2021-10-01 23:21 IST

ಮಂಗಳೂರು: ಕರ್ತವ್ಯ ನಿರತ ಮೆಸ್ಕಾಂ ಪವರ್‌ ಮ್ಯಾನ್ ಹಾಗೂ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ‌‌ ನಿಂದಿಸಿ, ಬೆದರಿಕೆ ಹಾಕಿದ ಆರೋಪಿ ಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಸುರತ್ಕಲ್‌ನ ಅಗರ್‌ ಮೈಲು ನಿವಾಸಿ ಮುಸ್ಬಾ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.

ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಮೆಸ್ಕಾಂ ಪವರ್‌ಮ್ಯಾನ್ ಯೆಲ್ಲಾಲಿಂಗ ಹಾಗೂ ಸಹೋದ್ಯೋಗಿ ಬಸವರಾಜ ಸುರತ್ಕಲ್‌ನ ಮುಸ್ಬಾ ಮನೆಗೆ ಶುಕ್ರವಾರ ಮಧ್ಯಾಹ್ನ ೧ ಗಂಟೆ‌ ಸುಮಾರಿಗೆ ತೆರಳಿದ್ದಾರೆ. ಬಿಲ್ ಪಾವತಿಸುವಂತೆ ಮನವಿ ಮಾಡಿದಾಗ ಆರೋಪಿಯು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ, ಮೆಸ್ಕಾಂ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆ ಒಡ್ಡಿದ ಆರೋಪವೂ ಮುಸ್ಬಾ ವಿರುದ್ಧ ಕೇಳಿಬಂದಿದೆ.

ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News