×
Ad

ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಪೆಟ್ರೋಲ್, ಡೀಸೆಲ್ ಬೆಲೆ

Update: 2021-10-02 11:50 IST

ಹೊಸದಿಲ್ಲಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಶನಿವಾರದಂದು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದು, ಸತತ ಎರಡನೇ ದಿನ ದರಗಳು ಏರಿಕೆಯಾಗಿದೆ. ಜಾಗತಿಕ ತೈಲ ಬೆಲೆಗಳು ಮೂರು ವರ್ಷದ ಗರಿಷ್ಠ ಮಟ್ಟದಲ್ಲಿದೆ.

ರಾಷ್ಟ ರಾಜಧಾನಿಯಲ್ಲಿ, ಪೆಟ್ರೋಲ್ ಬೆಲೆಯನ್ನು 25 ಪೈಸೆ ಹೆಚ್ಚಿಸಲಾಗಿದ್ದು ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ರೂ. 101.89 ರಿಂದ 102.14  ಏರಿಕೆಯಾಗಿದೆ. ಡೀಸೆಲ್ ದರವನ್ನು 30 ಪೈಸೆ ಹೆಚ್ಚಿಸಲಾಗಿದೆ. 90.17 ರಿಂದ 90.47 ಕ್ಕೆ ಹೆಚ್ಚಿಸಲಾಗಿದೆ ಎಂದು ಭಾರತೀಯ ತೈಲ ನಿಗಮ ತಿಳಿಸಿದೆ.

ಮುಂಬೈನಲ್ಲಿ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 24 ಪೈಸೆ ಹೆಚ್ಚಿಸಲಾಗಿದ್ದು ರೂ. 108.19 ಕ್ಕೆ ಏರಿಕೆಯಾಗಿದೆ. ಡೀಸೆಲ್ ದರವನ್ನು 32 ಪೈಸೆ ಏರಿಕೆ ಮಾಡಲಾಗಿದ್ದು 98.16 ರೂ. ಗೆ ತಲುಪಿದೆ.

ನಾಲ್ಕು ಮೆಟ್ರೋ ನಗರಗಳ ಪೈಕಿ  ಮುಂಬೈನಲ್ಲಿ ಇಂಧನ ದರಗಳು ಅತ್ಯಧಿಕವಾಗಿದೆ ಎಂದು ಸರಕಾರಿ ಸ್ವಾಮ್ಯದ ತೈಲ ಸಂಸ್ಕರಣಾಗಾರ ಹೇಳುತ್ತದೆ. ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ನಿಂದಾಗಿ ಇಂಧನ ದರಗಳು ರಾಜ್ಯದಾದ್ಯಂತ ಬದಲಾಗುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News