ಕಂಕನಾಡಿ: ನೂತನ ಬಸ್ಸು ತಂಗುದಾಣಕ್ಕೆ ಶಿಲಾನ್ಯಾಸ
ಮಂಗಳೂರು, ಅ.2: ಕಂಕನಾಡಿಯಲ್ಲಿರುವ ಫಾ. ಮುಲ್ಲರ್ ಆಸ್ಪತ್ರೆಯ ವತಿಯಿಂದ ಕಂಕನಾಡಿ-ವಲೆನ್ಸಿಯಾ ರಸ್ತೆಯಲ್ಲಿ ಹೊಸ ಬಸ್ಸು ತಂಗುದಾಣ ನಿರ್ಮಾಣಕ್ಕೆ ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ನಿರ್ದೇಶಕರ ರೆ.ಫಾ.ರಿಚರ್ಡ್ ಕೊವೆಲ್ಲೊ ಇಂದು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಹಳೆ ಬಸ್ಸು ತಂಗುದಾಣದ ತೆರವಿನಿಂದಾಗಿ ಜನರು ಕಷ್ಟಪಡುತ್ತಿದ್ದು, ಅವರ ಪ್ರಯಾಣ ಸುಗಮವಾಗಲೆಂದು ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಫಾ. ಮುಲ್ಲರ್ ಜನಪರ ಸೇವೆಯೊಂದಿಗೆ ಸಮಾಜಕ್ಕೆ ಇಂತಹ ಕೊಡುಗೆಯನ್ನು ಸದಾ ನೀಡುತ್ತಾ ಬಂದಿದೆ ಎಂದ ಅವರು, ಇದಕ್ಕೆ ಅನುಮತಿ ನೀಡಿದ ಮಂಗಳೂರು ಮಹಾನಗರ ಪಾಲಿಕೆಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಫಾ. ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ರೆ.ಫಾ. ರುಡಾಲ್ಫ್ ಡೇಸಾ, ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಫಾ.ಅಜಿತ್ ಮಿನೇಜಸ್, ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಫಾ.ನೆಲ್ಸನ್ ಪಾಯಸ್, ಚಾಪ್ಲಿನ್ ಫಾ. ರೊನಾಲ್ಡ್, ಚೀಪ್ ನರ್ಸಿಂಗ್ ಅಫೀಸರ್ ಸಿ. ಜಾನೆಟ್, ವೈದ್ಯಕೀಯ ಕಾಲೇಜಿನ ಡೀನ್ ಡಾ. ಜಯಪ್ರಕಾಶ್ ಆಳ್ವ, ಎಲೈಡ್ ಸಯನ್ಸ್ ವಿಭಾಗದ ಡೀನ್ ಡಾ.ಆ್ಯಂಟನಿ ಸೈಲಿಯನ್ ಹಾಗೂ ಕಾಮಗಾರಿ ಗುತ್ತಿಗೆದಾರ ಸಂದೇಶ ಎಂ. ಉಪಸ್ಥಿತರಿದ್ದರು.
ಇದೇ ವೇಳೆ ಫಾ. ಮುಲ್ಲರ್ ಎನ್ನೆಸ್ಸೆಸ್ ಸಹಯೋಗದಿಂದ ಸುಮಾರು ಮೂರು ಕಿ.ಮೀ ವರೆಗೆ ಸಚ್ಛತಾ ಕಾರ್ಯ ನಡೆಯಿತು.