×
Ad

ಕೆಥೋಲಿಕ್ ಸಭಾದಿಂದ ನಿರ್ಮಲ ಪರಿಸರ ಅಭಿಯಾನ

Update: 2021-10-02 18:13 IST

ಬ್ರಹ್ಮಾವರ, ಅ.2: ಕೆಥೊಲಿಕ್ ಸಭಾ ಕಲ್ಯಾಣಪುರ ವಲಯ ಸಮಿತಿ ಹಾಗೂ ಸಾಸ್ತಾನ ಸಂತ ಅಂತೋನಿ ಘಟಕ, ಐಸಿವೈಎಂ, ವೈಸಿಎಸ್ ಹಾಗೂ ಕೆಥೊಲಿಕ್ ಸ್ತ್ರೀ ಸಂಘಟನೆ ವತಿಯಿಂದ ಸಾಸ್ತಾನ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಶನಿವಾರ ನಿರ್ಮಲ ಪರಿಸರ ಸ್ವಚ್ಛತಾ ಅಭಿಯಾನ ಜರಗಿತು.

ಕಲ್ಯಾಣಪುರ ವಲಯದ ನಿಯೋಜಿತ ಅಧ್ಯಕ್ಷ ಲೂಯಿಸ್ ಡಿಸೋಜ, ಕೇಂದ್ರಿಯ ಸಮಿತಿಯ ನಿಯೋಜಿತ ಅಧ್ಯಕ್ಷ ಸಂತೋಷ್ ಕರ್ನೆಲಿಯೊ ಮತ್ತು ಸಾಸ್ತಾನ ಘಟಕದ ಆಧ್ಯಾತ್ಮಿಕ ನಿರ್ದೇಶಕ ವಂ.ಸುನೀಲ್ ಡಿಸಿಲ್ವಾ ನಿರ್ಮಲ ಪರಿಸರ ನಮ್ಮ ಜವಾಬ್ದಾರಿ ಅಭಿಯಾನಕ್ಕೆ ಜೊತೆಯಾಗಿ ಚಾಲನೆ ನೀಡಿದರು.

ಕೆಥೊಲಿಕ್ ಸಭಾ ವಲಯ ಕೋಶಾಧಿಕಾರಿ ಉರ್ಬಾನ್ ಲೂವಿಸ್, ಮಾಜಿ ಅಧ್ಯಕ್ಷ ಸ್ಟೀವನ್ ಪ್ರಕಾಶ್ ಲೂವಿಸ್, ಕೆಥೊಲಿಕ್ ಸಭಾ ಸಾಸ್ತಾನ ಘಟಕ ಅಧ್ಯಕ್ಷೆ ಸಿಂತಿಯಾ ಡಿಸೋಜ, ಕೆಥೊಲಿಕ್ ಸ್ತ್ರೀ ಸಂಘಟನೆ ಅಧ್ಯಕ್ಷೆ ಸರಿತಾ ಗೊನ್ಸಾಲ್ವಿಸ್, ಐಸಿವೈಎಂ ಅಧ್ಯಕ್ಷ ಆಲ್ವಿಟಾ ಕಾರ್ಡೋಜಾ, ವೈಸಿಎಸ್ ಸಚೇತಕಿ ಅನಿತಾ ಡಿಆಲ್ಮೇಡಾ, ಪದಾಧಿಕಾರಿಗಳಾದ ಜಾನೆಟ್ ಬಾಂಜ್, ವೀರಾ ಪಿಂಟೊ, ಲೂಯಿಸ್ ಮ್ಯಾಕ್ಷಿಮ್ ಡಿಸೋಜಾ, ಲೂಯಿಸ್ ಡಿಸೋಜಾ, ಜೊಸೇಫ್ ಡಿಸೋಜ, ರೋನಾಲ್ಡ್ ಪಿಂಟೊ, ಮೈಕಲ್ ಲೂವಿಸ್, ಸುಜಾನ್ನಾ ಡಿ ಆಲ್ಮೇಡಾ, ಪ್ರೀತಿ ಪಿಂಟೊ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News