ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಗಾಂಧಿ ಜಯಂತಿ
Update: 2021-10-02 19:32 IST
ಮಂಗಳೂರು, ಅ.2: ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಶನಿವಾರ ಮಹಾತ್ಮಾ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಶಾಲೆಯ ಸಂಚಾಲಕ ವ.ಧರ್ಮಗುರು ರೆ.ಡಾ. ಜೆ.ಬಿ. ಸಲ್ಡಾನ್ಹಾ ಗಾಂಧಿ ಚಿಂತನೆಯ ಬಗ್ಗೆ ಮಾತನಾಡಿದರು.
ಶಾಲೆಯ ಪ್ರಾಂಶುಪಾಲ ವ.ರೋಬರ್ಟ್ ಡಿಸೋಜ ಮತ್ತು ಉಪಪ್ರಾಂಶುಪಾಲೆ ಬೆಲಿಟಾ ಮಸ್ಕರೇನ್ಹಸ್ ಉಪಸ್ಥಿತರಿದ್ದರು.
ಗಾಂಧಿ ಜಯಂತಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿಯ ಜನ್ಮದಿನದ ಬಗ್ಗೆ ಕ್ರಮವಾಗಿ ಅನಿತಾ ಮೊರಾಸ್ ಹೆನ್ರಿ ಮಸ್ಕರೇನ್ಹಸ್ ಮಾತನಾಡಿದರು. ಶೈಲಾ ಪಿರೇರಾ ’ಸ್ವಚ್ಛ ಭಾರತ ಅಭಿಯಾನದ ಪ್ರತಿಜ್ಞೆ ಬೋಧಿಸಿದರು. ಸಂಗೀತಾ ಸಾಲಿನ್ಸ್ ಸ್ವಾಗತಿಸಿದರು. ನೊಲಿನ್ ಪಾಯ್ಸಾ ವ0ದಿಸಿದರು. ಪ್ರೀತಿ ಕೆ. ಕಾರ್ಯಕ್ರಮ ನಿರೂಪಿಸಿದರು. ಐವನ್ ಮಸ್ಕರೇನ್ಹಸ್ ಮತ್ತು ರೋಶನ್ ಕೊರ್ಡೊರಿಯೊ ಸಹಕರಿಸಿದರು.