ಎಸ್ಕೆಎಸ್ಸೆಸ್ಸೆಫ್ ಮಂಗಳೂರು ವಲಯ ದಿಂದ ವಿಖಾಯ ಡೇ
Update: 2021-10-02 20:42 IST
ಮಂಗಳೂರು : ಎಸ್ಕೆಎಸ್ಸೆಸ್ಸೆಫ್ ವಿಖಾಯ ಮಂಗಳೂರು ವಲಯ ವತಿಯಿಂದ ಮಂಗಳೂರಿನ ಸ್ನೇಹದೀಪ ಅನಾಥಾಶ್ರಮದಲ್ಲಿರುವ ಮಕ್ಕಳಿಗೆ ಹಣ್ಣು ಹಂಪಲನ್ನು ನೀಡಿ ವಿಖಾಯ ದಿನವನ್ನು ಆಚರಿಸಿದರು.
ಎಸ್ಕೆಎಸ್ಸೆಸ್ಸೆಫ್ ಬಗ್ಗೆ ಎ.ಕೆ. ಅಬ್ದುಲ್ ಖಾದರ್ ಹಾಗೂ ವಿಖಾಯದ ಬಗ್ಗೆ ಅಫ್ಸರ್ ಭಾಷಾ ಕುದ್ರೋಳಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಶ್ರಮದ ಮೇಲ್ವಿಚಾರಕಿ ತಬಸ್ಸುಂ ಅವರು ಆಶ್ರಮದಲ್ಲಿರವ ಮಕ್ಕಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಲಯ ವಿಖಾಯ ಚೇರ್ಮೆನ್ ಅಫ್ಸರ್ ಭಾಷಾ ಎಸ್ಕೆಎಸ್ಸೆಸ್ಸೆಫ್ ಮಂಗಳೂರು ವಲಯಾಧ್ಯಕ್ಷ ಎ.ಕೆ.ಅಬ್ದುಲ್ ಖಾದರ್ ವಿಖಾಯ ನಾಯಕರಾದ ಫರಾಝ್ ಕುದ್ರೋಳಿ ಇಂಶಾದ್ ಫರಂಗಿಪೇಟೆ ಅಬ್ದುಲ್ ಹಮೀದ್ ಮಾರಿಪಳ್ಳ ಹಾಗೂ ಶಾರೀಕ್ ಕುದ್ರೋಳಿ ಉಪಸ್ಥಿತರಿದ್ದರು.