×
Ad

ಮನೆಗೆ ನುಗ್ಗಿ ಚಿನ್ನಾಭರಣ ಕಳವು

Update: 2021-10-02 22:15 IST

ಮಣಿಪಾಲ, ಅ. 2: 80 ಬಡಗಬೆಟ್ಟು ಗ್ರಾಮದ ಮಂಚಿಕೆರೆ ಎಂಬಲ್ಲಿ ಅ.1ರಂದು ಬೆಳಗ್ಗೆ 10.30ರಿಂದ ರಾತ್ರಿ 8.45ರ ಮಧ್ಯಾವಧಿಯಲ್ಲಿ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಅಶ್ವಿನ್ ಕುಮಾರ್ ಎಂಬವರ ಮನೆಯ ಹಾಲಿನ ಹಿಂಭಾಗದ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಬೆಡ್ರೂಮ್ ನಲ್ಲಿನ ಕಾಪಾಟಿನಲ್ಲಿದ್ದ ಹವಳದ ಬಂಗಾರದ ಸರ, ಚಿನ್ನದ ಸರ, ಚಿನ್ನದ ಚೈನ್, ಸೊಂಟದ ಚೈನ್, ಮಕ್ಕಳ ಹಳವದ ಚೈನ್, 2 ಮುತ್ತಿನ ಬಳೆಗಳು, 2 ಬಳೆಗಳು ಹಾಗೂ ಒಂದು ಮೊಬೈಲ್ ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 4 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News