×
Ad

ಕಾಪು: ಎಸೆಸೆಲ್ಸಿಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿನಿಗೆ ನಮ್ಮ ನಾಡ ಒಕ್ಕೂಟ ವತಿಯಿಂದ ಸನ್ಮಾನ

Update: 2021-10-03 14:17 IST

ಕಾಪು: ನಮ್ಮ ನಾಡ ಒಕ್ಕೂಟ ಕಾಪು ತಾಲೂಕು ವತಿಯಿಂದ 2020-21 ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಕ  ಪಡೆದ ಪ್ರತಿಭಾವಂತ ವಿದ್ಯಾರ್ಥಿನಿ ಅಬೂಬಕ್ಕರ್ ಹಸನಬ್ಬ ಉಚ್ಚಿಲ ಪೊಲ್ಯ ಅವರ ಪುತ್ರಿ ಸುಝಾನ ಫಾತಿಮಾರನ್ನು ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಲಾಯಿತು.

ಈ ಸಂದರ್ಭ ನಮ್ಮ ನಾಡ ಒಕ್ಕೂಟ ಕಾಪು ತಾಲೂಕು ಅಧ್ಯಕ್ಷ ಅಶ್ರಫ್ ಪಡುಬಿದ್ರಿ ಅವರು ನಮ್ಮ ನಾಡ ಒಕ್ಕೂಟದ ಧ್ಯೇಯೋದ್ದೇಶದ ಬಗ್ಗೆ ವಿವರಿಸಿದರು.

ಉಪಾಧ್ಯಕ್ಷರಾದ ಸುಲೈಮಾನ್ ಶಿರ್ವ ಹಾಗು ನಮ್ಮ ನಾಡ ಒಕ್ಕೂಟ ಕಾಪು ತಾಲೂಕು ಪ್ರ. ಕಾರ್ಯದರ್ಶಿ ಅಬ್ದುಲ್ ಹಮೀದ್ ಯೂಸುಫ್, ಜಿಲ್ಲಾ ಸಮಿತಿ ಸದಸ್ಯ ಇಬ್ರಾಹೀಮ್ ತವಕ್ಕಲ್, ಕಾಪು ತಾಲೂಕು ಕೋಶಾಧಿಕಾರಿ ರಶೀದ್ ಕಟಪಾಡಿ, ಕಾಪು ತಾಲೂಕು ಸಂಘಟನಾ ಕಾರ್ಯದರ್ಶಿ ಅಬ್ದುಲ್ ರಝಾಕ್ ಹುಸೈನ್ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News