ಭವಾನಿಪುರ ಉಪ ಚುನಾವಣೆ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಭರ್ಜರಿ ಗೆಲುವು

Update: 2021-10-03 09:43 GMT

ಕೋಲ್ಕತ್ತಾ: ದಕ್ಷಿಣ ಕೊಲ್ಕತ್ತಾ ಕ್ಷೇತ್ರವಾದ ಭವಾನಿಪುರದ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಅವರು ರವಿವಾರ  ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ವಿರುದ್ಧ 58,832 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ನಡೆದ ರಾಜ್ಯ ಚುನಾವಣೆಯಲ್ಲಿ ಮಮತಾ ಸೋತಿದ್ದರು. ಹೀಗಾಗಿ  ಬಂಗಾಳದ ಮುಖ್ಯಮಂತ್ರಿಯಾಗಿ ಉಳಿಯಲು ಭವಾನಿಪುರ ಕ್ಷೇತ್ರವನ್ನು ಗೆಲ್ಲಲೇಬೇಕಿತ್ತು.

ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ಸೋಲನ್ನು ಒಪ್ಪಿಕೊಂಡಿದ್ದಾರೆ ಹಾಗೂ ಮಮತಾ ಅವರು ಭರವಸೆ ನೀಡಿದ 1 ಲಕ್ಷ ಮತಗಳ ಅಂತರವನ್ನು ಪಡೆದಿಲ್ಲ ಎಂದು ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಈ ಹಿಂದೆ  ಬಿಜೆಪಿ ನಾಯಕ ಸುವೇಂದು  ಅಧಿಕಾರಿ ವಿರುದ್ಧ ನಂದಿಗ್ರಾಮದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು.  

"ನಿಮಗೆಲ್ಲರಿಗೂ ನನ್ನ ಧನ್ಯವಾದಗಳು . ಸಹೋದರಿಯರು, ಸಹೋದರರು, ತಾಯಂದಿರು, ಭಾರತದ ಎಲ್ಲರಿಗೂ ಧನ್ಯವಾದಗಳು . ಭವಾನಿಪುರದ ಜನರು ನನ್ನ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ನನಗೆ ಸಂತೋಷವಾಗಿದೆ. 2016ರಲ್ಲಿ ನಾನು ಕೆಲವು ವಾರ್ಡ್ ಗಳಲ್ಲಿ ಸ್ವಲ್ಪವೇ ಮತ ಪಡೆದಿದ್ದೆ. ಭವಾನಿಪುರದ  ಶೇ.46ರಷ್ಟು ಬಂಗಾಳಿಯೇತರರು ಹಾಗೂ ಎಲ್ಲರೂ  ನನಗೆ ಮತ ಹಾಕಿದ್ದಾರೆ. ನಾನು ಭವಾನಿಪುರದ ಜನರಿಗೆ ಋಣಿಯಾಗಿರುವೆ’’ ಎಂದು ಭರ್ಜರಿ ಗೆಲುವಿನ ಬಳಿಕ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದರು.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News