×
Ad

ಕೆಮ್ಮಣ್ಣು: ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

Update: 2021-10-03 19:56 IST

ಉಡುಪಿ, ಅ.3: ಕೆಮ್ಮಣ್ಣು ಸರಕಾರಿ ಪದವಿಪೂರ್ವ ಕಾಲೇಜು ಹಾಗೂ ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಕೆಮ್ಮಣ್ಣು ಗ್ರಾಪಂ, ಗಣಪತಿ ಕೋ ಆಪರೇಟಿವ್ ಸೊಸೈಟಿ, ನಿರ್ಮಲ ತೋನ್ಸೆ, ಧರ್ಮಸ್ಥಳ ಸ್ವಸಹಾಯ ಸಂಘಗಳ ಒಕ್ಕೂಟ, ಲಯನ್ಸ್ ಕ್ಲಬ್ ಕಲ್ಯಾಣಪುರ, ಲಯನ್ಸ್ ಕ್ಲಬ್ ಸಂತೆಕಟ್ಟೆ, ಲಯನ್ಸ್ ಕ್ಲಬ್ ಇಂದ್ರಾಳಿ, ಲಯನ್ಸ್ ಕ್ಲಬ್ ಚೇತನ, ಸ್ವಚ್ಛ ಭಾರತ್ ಫ್ರೆಂಡ್ಸ್, ಕೆಮ್ಮಣ್ಣು ಕ್ರಿಕೆಟರ್ಸ್, ಹಂಪನಕಟ್ಟೆ ಫ್ರೆಂಡ್ಸ್, ಕುದ್ರು ಯುವಕ ಮಂಡಲ, ಕಂಡಾಳ ಫ್ರೆಂಡ್ಸ್, ಕ್ಯಾಥೊಲಿಕ್ ಸಭಾ ಮೌಂಟ್ ರೋಸರಿ ಚರ್ಚ್ ಯೂನಿಟ್ ಜಂಟಿ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು್ತ.

ಕಾರ್ಯಕ್ರಮಕ್ಕೆ ನಿರ್ಮಲ್ ತೋನ್ಸೆ ಸ್ಥಾಪಕಾಧ್ಯಕ್ಷ ಹಾಗೂ ಗೌರವಾಧ್ಯಕ್ಷ ಹಾಗೂ ತೋನ್ಸೆ ಹೆಲ್ತ್ ಸೆಂಟರ್ನ ಅಧ್ಯಕ್ಷ ಬಿ.ಎಂ.ಜಾಫರ್ ಚಾಲನೆ ನೀಡಿದರು. ಉಪನ್ಯಾಸಕ ಗಣೇಶ್ ಪ್ರಸಾದ್ ಜಿ.ನಾಯಕ್ ಮಾತನಾಡಿದರು. ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆ ನಡೆಸಿದರು. ಸಭಾ ಕಾರ್ಯಕ್ರಮದ ನಂತರ ಕಾಲೇಜಿನ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.

ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ.ಸಿ ಇದರ ನಂದಕಿಶೋರ್ ಗೌರವ ಸ್ಮರಣಿಕೆ ಹಾಗೂ ಪ್ರಮಾಣಪತ್ರ ವಿತರಿಸಿದರು. ಪಂಚಾಯತ್ ಕಾರ್ಯದರ್ಶಿ ದಿನಕರ್ ಬೆಂಗ್ರೆ, ಸದಸ್ಯರಾದ ಸಂಧ್ಯಾ, ಪ್ರಶಾಂತ್ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಕ್ಸೇವಿಯರ್ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಂದನಾ ವಂದಿಸಿದರು. ಉಪನ್ಯಾಸಕ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News