ಗಾಂಧಿ ‘ಹಿಂದ್ ಸ್ವರಾಜ್’ನಲ್ಲಿ ನೈತಿಕ ಮೌಲ್ಯಗಳ ನಾಗರಿಕತೆ ಪ್ರತಿಪಾದನೆ: ಡಾ.ಚಂದನ್ ಗೌಡ
ಉಡುಪಿ, ಅ.3: ಮಹಾತ್ಮಾ ಗಾಂಧಿ ಅವರು ಬರೆದಿರುವ ಪುಟ್ಟ ಪುಸ್ತಕ ‘ಹಿಂದ್ ಸ್ವರಾಜ್’, ಆಧುನಿಕ ನಾಗರಿಕತೆಯ ಕಟು ಭೌತವಾದ ಹಾಗೂ ಗ್ರಾಹಕ ಮನಸ್ಥಿತಿಗೆ ಪರ್ಯಾಯವಾಗಿ ನೈತಿಕ ಮೌಲ್ಯಗಳೇ ಆಧಾರವಾಗಿರುವ ನಾಗರಿಕತೆಯನ್ನು ಪ್ರತಿಪಾದಿಸುತ್ತದೆ ಎಂದು ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಆಫ್ ಸೋಶಿಯಲ್ ಆ್ಯಂಡ್ ಎಕನಾಮಿಕ್ ಚೇಂಜ್ (ಐಎಸ್‌ಇಸಿ)ನ ಪ್ರಾಧ್ಯಾಪಕ ಡಾ. ಚಂದನ್ ಗೌಡ ಹೇಳಿದ್ದಾರೆ.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಯ ಗಾಂಧಿ ಸೆಂಟರ್ ಫಾರ್ ಫಿಲಾಸಫಿಕಲ್ ಆಟ್ಸರ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ಗಾಂಧಿಜಯಂತಿ ಸಂದರ್ಭದಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ನಮ್ಮ ಕಾಲದಲ್ಲಿ ಹಿಂದ್ ಸ್ವರಾಜ್’ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
1909ರಲ್ಲಿ ಗಾಂಧೀಜಿ ಬರೆದ ಈ ಪುಟ್ಟ ಪುಸ್ತಕ ಪ್ರಸ್ತುತ ಅತಿಯಾಗಿ ಏರುತ್ತಿರುವ ಪ್ರಾಪಂಚಿಕ ಮತ್ತು ಗ್ರಾಹಕ ಮನೋಭಾವವು ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ಮತ್ತು ವಿವಿಧ ರೀತಿಯ ಹಿಂಸೆಗಳಂತಹ ವಿಪತ್ತಿನ ಹಾದಿಯಲ್ಲಿ ನಾಗರಿಕತೆಯನ್ನು ಕೊಂಡೊಯ್ಯುತ್ತಿರುವ ಇತ್ತೀಚಿನ ದಿನಗಳಲ್ಲಿ ಮತ್ತೊಮ್ಮೆ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ ಎಂದರು.
ಗಾಂಧೀಜಿ ಅವರು ‘ಸ್ವರಾಜ್’ (ಒಳ ಮತ್ತು ಹೊರಗಿನ ಸ್ವಯಂ-ಆಡಳಿತ) ನಾಗರಿಕತೆಯನ್ನು ದುರಂತದಿಂದ ರಕ್ಷಿಸುವ ನೈತಿಕ ಆಧಾರವಾಗಬಲ್ಲದು ಎಂದು ಯೋಚಿಸುತ್ತಿದ್ದರು. ಅಹಿಂಸಾ ಮಾರ್ಗದ ಮೂಲಕವೇ ಅಪೇಕ್ಷಿಸುವುದನ್ನು ಸಾಧಿಸುವುದು ಗಾಂಧೀಜಿಗೆ ಅತ್ಯಂತ ಮಹತ್ವದ್ದಾಗಿತ್ತು ಎಂದು ಪ್ರೊ. ಚಂದನ್ ಅಭಿಪ್ರಾಯಪಟ್ಟರು.
‘ಹಿಂದ್ ಸ್ವರಾಜ್’ ಓದಿನ ಜೊತೆಗೆ ಅದೇ ದಾರಿಯಲ್ಲಿ ಗಾಂಧೀಜಿಯವರ ಪುನರ್ನಿರ್ಮಾಣದ ಚಿಂತನೆಗಳನ್ನು ಅವಲೋಕಿಸುವ ಇನ್ನೊಂದು ಸಣ್ಣ ಪಠ್ಯ ‘ಕನ್ಸ್ಸ್ಟ್ರಕ್ಟಿವ್ ಪ್ರೋಗ್ರಾಮ್ಸ್’(ರಚನಾತ್ಮಕ ಕಾರ್ಯಕ್ರಮಗಳು)ನ್ನು ಓದಬೇಕು ಎಂದು ಡಾ.ಗೌಡ ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ದೇಶದಲ್ಲಿ ಸದ್ಯ ನಡೆಯುತ್ತಿರುವ ರೈತರ ಪ್ರತಿಭಟನೆ ಅಹಿಂಸೆಯ ದಾರಿಯಲ್ಲಿ ಸಾಗುವವರೆಗೂ ತನ್ನ ನೈತಿಕ ಶಕ್ತಿಯನ್ನು ಹಿಡಿದಿಟ್ಟುಕೊಳ್ಳುತ್ತದೆ. ನಿಷ್ಕೃಿಯ ಪ್ರತಿರೋಧ ’ಸತ್ಯಾಗ್ರಹ’ಕ್ಕೆ ಸಮಾನಾರ್ಥಕವಲ್ಲ ಎಂದು ಅವರು ನುಡಿದರು.
ಇದಕ್ಕೂ ಮುನ್ನ ಮಾತನಾಡಿದ ಜಿಸಿಪಿಎಎಸ್ ನಿರ್ದೇಶಕ ಪ್ರೊ.ವರದೇಶ ಹಿರೇಗಂಗೆ, ಸರ್ವೋದಯವೇ ಗಾಂಧೀಜಿಯವರ ಅಂತಿಮ ಆದರ್ಶವಾಗಿದ್ದು, ಅದು ಪ್ರತಿಯೊಬ್ಬರ ಮತ್ತು ಪ್ರತಿಯೊಂದರ ಕಲ್ಯಾಣವನ್ನು ಒಳಗೊಂಡಿದೆ. ಪುರುಷರು, ಮಹಿಳೆಯರು, ಎಲ್ಲಾ ಜಾತಿ, ವರ್ಗಗಳು, ಪ್ರದೇಶ, ಧರ್ಮ, ದೇಶ, ಖಂಡ, ಪ್ರಕೃತಿ, ಸಂಸ್ಕೃತಿ, ಸಸ್ಯ, ಪ್ರಾಣಿ, ನದಿ ಮತ್ತು ಪರ್ವತಗಳೆಲ್ಲವೂ ಇದರ ಭಾಗ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಜಿಸಿಪಿಎಎಸ್ ನಿರ್ದೇಶಕ ಪ್ರೊ.ವರದೇಶ ಹಿರೇಗಂಗೆ, ಸರ್ವೋದಯವೇ ಗಾಂಧೀಜಿಯವರ ಅಂತಿಮ ಆದರ್ಶವಾಗಿದ್ದು, ಅದು ಪ್ರತಿಯೊಬ್ಬರ ಮತ್ತು ಪ್ರತಿಯೊಂದರ ಕಲ್ಯಾಣವನ್ನು ಒಳಗೊಂಡಿದೆ. ಪುರುಷರು, ಮಹಿಳೆಯರು, ಎಲ್ಲಾ ಜಾತಿ, ವರ್ಗಗಳು, ಪ್ರದೇಶ, ರ್ಮ,ದೇಶ,ಖಂಡ,ಪ್ರಕೃತಿ,ಸಂಸ್ಕೃತಿ,ಸಸ್ಯ,ಪ್ರಾಣಿ,ನದಿಮತ್ತುಪರ್ವತಗಳೆಲ್ಲವೂಇದರಾಗ ಎಂದರು. ಪ್ರೊ.ಫಣಿರಾಜ್, ಪ್ರೊ.ತುಂಗೇಶ್, ಬೆನಿಟಾ ಫೆರ್ನಾಂಡಿಸ್ ಮತ್ತು ಅನೇಕ ಮಂದಿ ಚರ್ಚೆಯಲ್ಲಿ ಭಾಗವಹಿಸಿದ್ದರು. ಜೂಡಿ ಫೇಬರ್ ಕಾರ್ಯಕ್ರಮ ನಿರೂಪಿಸಿ, ಶ್ರಾವ್ಯ ಬಾಸ್ರಿ ‘ವೈಷ್ಣವ ಜನತೋ’ ಮೂಲ ಮತ್ತು ಕನ್ನಡ ಅವತರಣಿಕೆಗಳನ್ನು ಹಾಡಿದರು. ಮರಿಯಮ್ ರಾಯ್ ವಂದಿಸಿದರು.