ಕಾಸರಗೋಡು: ಉತ್ತರ ಪ್ರದೇಶ ಹಿಂಸಾಚಾರ ಖಂಡಿಸಿ ಕೃಷಿಕರಿಂದ ಪ್ರತಿಭಟನೆ
Update: 2021-10-04 11:25 IST
ಕಾಸರಗೋಡು, ಅ.4: ಉತ್ತರ ಪ್ರದೇಶದ ಲಖಿಂಪುರ ಖೇರಿ ಎಂಬಲ್ಲಿ ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಉಂಟಾದ ಹಿಂಸಾಚಾರದಿಂದ ರೈತರು ಬಲಿಯಾದ ಘಟನೆ ಖಂಡಿಸಿ ಸಂಯುಕ್ತ ಕೃಷಿಕರ ಹೋರಾಟ ಸಮಿತಿಯ ನೇತೃತ್ವದಲ್ಲಿ ಇಂದು ಬೆಳಗ್ಗೆ ಕಾಸರಗೋಡು ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಮಾಜಿ ಶಾಸಕ ಕೆ.ಕುಂಞಿರಾಮನ್ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದರು. ಅಖಿಲ ಭಾರತ ಕಿಸಾನ್ ಸಭಾ ಜಿ ಲ್ಲಾಧ್ಯಕ್ಷ ಹಸೈನಾರ್, ಕಾರ್ಯದರ್ಶಿ ಪಿ.ಜನಾರ್ದನ, ಕೆ.ಆರ್.ಜಯಾನಂದ ಮೊದಲಾದವರು ಪಾಲ್ಗೊಂಡಿದ್ದರು.