×
Ad

ಬೇಕಲ: ಸಮುದ್ರಪಾಲಾಗಿದ್ದ ಯುವಕನ ಮೃತದೇಹ ಪತ್ತೆ

Update: 2021-10-04 11:35 IST

ಕಾಸರಗೋಡು, ಅ.4: ಬೇಕಲ ಸಮುದ್ರದಲ್ಲಿ ರವಿವಾರ ಸಂಜೆ ಸ್ನಾನಕ್ಕಿಳಿದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಕೋಟಿಕುಳಂನಲ್ಲಿ ಇಂದು ಪತ್ತೆಯಾಗಿದೆ.

ಕೋಲ್ಕತ್ತಾ ನಿವಾಸಿ ಶಫೀವುಲ್ ಇಸ್ಲಾಂ(25) ಮೃತಪಟ್ಟ ಯುವಕ. ಇವರು ರವಿವಾರ ಸಂಜೆ ಸಮುದ್ರಕ್ಕೆ ಸ್ನಾನಕ್ಕಿಳಿದ ಸಂದರ್ಭ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರದಲ್ಲಿ ನಾಪತ್ತೆಯಾಗಿದ್ದರು. ಪೊಲೀಸರು, ಮೀನುಗಾರರು ಶೋಧ ನಡೆಸಿದ್ದರೂ ಪತ್ತೆ ಸಾಧ್ಯವಾಗಿರಲಿಲ್ಲ. ಇಂದು ಶಫೀವುಲ್ ಇಸ್ಲಾಂ ಮೃತದೇಹ ಕೋಟಿಕುಳಂನ ಸಮೀಪ ಸಮುದ್ರ ತೀರದ ಬಂಡೆಕಲ್ಲುಗಳ ನಡುವೆ ಪತ್ತೆಯಾಗಿದೆ.

ಶಫೀವುಲ್ ಇಸ್ಲಾಂ ಬೇಕಲದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ದುಡಿಯುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News