ಇಟಲಿ ಬಳಿ ವಿಮಾನ ಅಪಘಾತ: 8 ಮಂದಿ ಮೃತ್ಯು

Update: 2021-10-04 15:46 GMT

ರೋಮ್, ಅ.4: 8 ಜನ ಪ್ರಯಾಣಿಕರಿದ್ದ ಸಣ್ಣ ಖಾಸಗಿ ವಿಮಾನವೊಂದು ಉತ್ತರ ಇಟಲಿಯ ಮಿಲಾನ್ ನಗರದ ಹೊರವಲಯದಲ್ಲಿ ಖಾಲಿ ಕಟ್ಟಡಕ್ಕೆ ಅಪ್ಪಳಿಸಿದ್ದರಿಂದ ವಿಮಾನದಲ್ಲಿದ್ದ ಎಲ್ಲಾ 8 ಮಂದಿಯೂ ಮೃತಪಟ್ಟಿದ್ದಾರೆ ಎಂದು ಇಟಲಿಯ ಮಾಧ್ಯಮಗಳು ವರದಿ ಮಾಡಿವೆ.

ರೊಮಾನಿಯಾದ ಕೋಟ್ಯಾಧಿಪತಿ ಡ್ಯಾನ್ ಪೆಟ್ರೆಸ್ಕು ವಿಮಾನ ಚಲಾಯಿಸುತ್ತಿದ್ದರು. ಅವರ ಜತೆಗೆ ಪ್ರಯಾಣಿಸುತ್ತಿದ್ದ ಪತ್ನಿ, 30 ವರ್ಷದ ಪುತ್ರ ಡ್ಯಾನ್ ಸ್ಟಿಫಾನೋ, ಕುಟುಂಬದ ಸ್ನೇಹಿತರಾದ ಇಬ್ಬರು ಯುವತಿಯರು, ದಂಪತಿ ಮತ್ತು ಅವರ 1 ವರ್ಷದ ಮಗು ಅಪಘಾತದಲ್ಲಿ ಮೃತರಾಗಿದ್ದಾರೆ. ಮಿಲಾನ್ನ ಲಿನೆಟ್ ನಗರದ ವಿಮಾನ ನಿಲ್ದಾಣದಿಂದ ಸಾರ್ಡಿಯಾನ ದ್ವೀಪಕ್ಕೆ ಈ ವಿಮಾನ ಪ್ರಯಾಣಿಸುತ್ತಿ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಮುಖ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದ ಪೆಟ್ರೆಸ್ಕು, ಹೈಪರ್ಮಾರ್ಕೆಟ್ ಹಾಗೂ ಮಾಲ್ಗಳ ಸರಣಿಯನ್ನು ಆರಂಭಿಸಿದ್ದರು. ರೊಮಾನಿಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದ ಅವರು ಫ್ರಾನ್ಸ್ನ ನಾಗರೀಕತ್ವವನ್ನೂ ಹೊಂದಿದ್ದರು. ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ವರದಿ ಹೇಳಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News