ಅ. 5ರಂದು ವಕ್ಫ್ ಮತ್ತು ಅಲ್ಪ ಸಂಖ್ಯಾತರ ಇಲಾಖೆ ಮಾಹಿತಿ ಕಾರ್ಯಾಗಾರ
Update: 2021-10-04 22:11 IST
ಪುತ್ತೂರು : ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಅಶ್ರಯಲ್ಲಿ ವಕ್ಫ್ ಮತ್ತು ಅಲ್ಪ ಸಂಖ್ಯಾತರ ಇಲಾಖೆಯಿಂದ ಮಾಹಿತಿ ಕಾರ್ಯಾಗಾರ ಮಂಗಳವಾರ ಪುತ್ತೂರಿನ ಸಾಲ್ಮರ ಕೊಟೇಚಾ ಹಾಲ್‍ನಲ್ಲಿ ನಡೆಯಲಿದೆ ಎಂದು ಸಂಯುಕ್ತ ಜಮಾಅತ್ ಪ್ರಕಟಣೆ ತಿಳಿಸಿದೆ.
ಕಾರ್ಯಾಗಾರದ ಅಧ್ಯಕ್ಷತೆಯನ್ನು ತಾಲೂಕು ಮುಸ್ಲಿಂ ಸಂಯಕ್ತ ಜಮಾಅತ್ ಅಧ್ಯಕ್ಷ ಕೆ.ಪಿ. ಮಹಮ್ಮದ್ ಹಾಜಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ. ವಕ್ಫ್ ಅಧಿಕಾರಿ ಅಬೂಬಕ್ಕರ್, ದ.ಕ.ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಅಧಿಕಾರಿ ಅಂಜನಪ್ಪ, ಮಂಗಳೂರು ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮಹಮ್ಮದ್ ಫಾರೂಕ್, ರಾಷ್ಟ್ರೀಯ ತರಬೇತುದಾರ ರಫೀಕ್ ಮಾಸ್ಟರ್ ಭಾಗವಹಿಸಲಿದ್ದಾರೆ.
ಪುತ್ತೂರು ತಾಲೂಕಿನ ಎಲ್ಲಾ ಮಸೀದಿಗಳ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.