ಮಂಗಳೂರು : ತುಳುಭವನದ ಯೋಗ ಶಿಬಿರ ಸಮಾರೋಪ
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ , ಸಹಯೋಗದಲ್ಲಿ ಧೀ ಶಕ್ತಿ ಜ್ಞಾನ ಯೋಗದ ವತಿಯಿಂದ ನಡೆದ ಹತ್ತು ದಿನಗಳ ಧ್ಯಾನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ಮಂಗಳೂರಿನ ತುಳು ಅಕಾಡಮಿ ಭವನದಲ್ಲಿ ನಡೆಯಿತು.
ಹತ್ತು ದಿನಗಳ ಕಾಲ ಉಚಿತ ಯೋಗ ಶಿಬಿರ ನಡೆಸಿದ ಯೋಗ ಗುರು ಸುರೇಂದ್ರಜೀ ಅವರಿಗೆ ಗುರು ವಂದನಾ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಯೋಗ ಧ್ಯಾನ ಮನುಷ್ಯನ ಆರೋಗ್ಯದ ಹಿತ ದೃಷ್ಟಿಯಿಂದ ಒಂದು ಉತ್ತಮ ವ್ಯವಸ್ಥೆ ಆಗಿದೆ. ಜೀವನದಲ್ಲಿ ಧ್ಯಾನ ಯೋಗ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತ್ತು ಎಂಬುದಕ್ಕೆ ಭಾರತದಲ್ಲಿದ್ದ ಖುಷಿ ಮುನಿಗಳು ಪ್ರಮುಖ ಉದಾಹರಣೆ ಆಗಿದ್ದಾರೆ. ನಿರಂತರ ಧ್ಯಾನ ಯೋಗದ ಮೂಲಕ ಮನುಷ್ಯ ಆರೋಗ್ಯವನ್ನು ಹಿಡಿತದಲ್ಲಿ ಇಡಲು ಸಾಧ್ಯ. ಇಂದು ಯೋಗ ಧ್ಯಾನ ಹಿರಿಯರಿಗೆ ಮಾತ್ರವಲ್ಲದೆ ಶಾಲಾ ವಿದ್ಯಾರ್ಥಿಗಳಿಗೂ ಇದರ ಅಗತ್ಯತೆ ಇದೆ. ಶಾಲೆಯಲ್ಲೂ ಒಂದು ಅವಧಿ ಯೋಗ ಧ್ಯಾನಕ್ಕಾಗಿ ಮೀಸಲು ಇಡಬೇಕಾಗಿದೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಎಂಎಲ್ ಸಿ ಪ್ರತಾಪ್ ಸಿಂಹ ನಾಯಕ್ , ಮಂಗಳೂರು ಮನಪಾ ಮೇಯರ್ ಪ್ರೆಮಾನಂದ್ ಶೆಟ್ಟಿ, ರೊಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ರಾಮಶೇಷ ಶೆಟ್ಟಿ, ರೋಟರಿ ಕ್ಲಬ್ ಮಾಜಿ ರಾಜ್ಯಪಾಲರಾಗಿದ್ದ ಡಾ ದೇವದಾಸ್ ರೈ, ಮನಪ ಸದಸ್ಯರಾದ ಜಯಲಕ್ಷ್ಮಿ ಶೆಟ್ಟಿ, ಗಣೇಶ್ ಕುಲಾಲ್, ಸಮಾಜ ಸೇವಕಿ ಕಾಂತಿ ಲತ ಶೆಟ್ಟಿ, ತುಳು ಅಕಾಡೆಮಿ ಸದಸ್ಯರಾದ ಶಶಿಧರ್ ಶೆಟ್ಟಿ, ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಪೇರ್ ಯುವ ವಿಭಾಗದ ಅಧ್ಯಕ್ಷ ದೇವಿಚರಣ್ ಶೆಟ್ಟಿ, ರೋಟರಿ ಕ್ಲಬ್ ಸೆಂಟ್ರಲ್ ನಿಯೋಜಿತ ರಾಜ್ಯಪಾಲ ಪ್ರಕಾಶ್ ಕಾರಂತ್ ಉಪಸ್ಥಿತರಿದ್ದರು. ಧೀ ಶಕ್ತಿ ಜ್ಞಾನ ಯೋಗ ಸಂಚಾಲಕ ರಾಜ್ ಗೋಪಾಲ್ ರೈ ಕಾರ್ಯಕ್ರಮ ನಿರೂಪಿಸಿರು. ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ್ ಕತ್ತಲ್ಸಾರ್ ಸ್ವಾಗತಿಸಿದರು. ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವಸಂತ್ ಶೆಟ್ಟಿ ವಂದಿಸಿದರು.