ಪುತ್ತೂರು: ವಿದ್ಯುತ್ ಅವಘಡಕ್ಕೆ ಕೃಷಿಕ ಬಲಿ
Update: 2021-10-05 17:35 IST
ಪುತ್ತೂರು: ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದರಾಗಿದ ವೇಳೆ ವಿದ್ಯುತ್ ಶಾಕ್ ಗೆ ತುತ್ತಾಗಿ ಕೃಷಿಕರೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಬೋಳೋಡಿ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಪುತ್ತೂರು ತಾಲೂಕಿನ ಕರ್ನೂರು ನಿವಾಸಿ ಕುದ್ಕಾಡಿ ದಿ.ಸೋಮಪ್ಪ ರೈ ಎಂಬವರ ಪುತ್ರ ಧನಂಜಯ ರೈ(53) ಮೃತರು.
ತನ್ನ ಪತ್ನಿಯ ಮನೆಯಾದ ಬೋಳೋಡಿಯಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವರು ಅಕಸ್ಮಿಕವಾಗಿ ವಿದ್ಯುತ್ ಶಾಕಿಗೆ ತುತ್ತಾಗಿ ತೀವ್ರ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಫತ್ರೆಗೆ ತಲುಪುತ್ತಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.