ಅ.6ರಂದು ಪ್ರೊ.ಕೆ.ಪಿ.ರಾವ್ ಅವರ ನೂತನ ಕಾದಂಬರಿ ‘ವರ್ಣಕ’ ಕುರಿತು ಸಂವಾದ
Update: 2021-10-05 19:02 IST
ಉಡುಪಿ, ಅ.5: ಹಿರಿಯ ವಿದ್ವಾಂಸ, ಕಂಪ್ಯೂಟರ್ ಲಿಪಿ ತಜ್ಞ ಪ್ರೊ.ಕೆ.ಪಿ. ರಾವ್ ಅವರ ನೂತನ ಕಾದಂಬರಿ ’ವರ್ಣಕ’ ಕುರಿತು ಅವರ ಮಾತು ಮತ್ತು ಸಂವಾದವನ್ನು ಅ.6ರ ಬುಧವಾರ ಸಂಜೆ 4:45ಕ್ಕೆ ಏರ್ಪಡಿಸಲಾಗಿದೆ.
ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆಟ್ಸರ್ ಅಂಡ್ ಸೈನ್ಸಸ್ ಸಭಾಂಗಣದಲ್ಲಿ (ಹಳೆ ಟ್ಯಾಪ್ಮಿ ಕಟ್ಟಡದ ಮೊದಲ ಮಹಡಿ) ಈ ಸಂವಾದ ನಡೆಯಲಿದೆ ಎಂದು ಕೇಂದ್ರದ ಪ್ರಕಟಣೆ ತಿಳಿಸಿದೆ.