ನಿಷೇಧಿತ ಪದ್ಧತಿಯ ಮೀನುಗಾರಿಕೆಗೆ ತಡೆ
Update: 2021-10-05 19:56 IST
ಮಂಗಳೂರು, ಅ.5: ಸರಕಾರದ ಆದೇಶದಂತೆ ಬೆಳಕು ಮೀನುಗಾರಿಕೆ ಮತ್ತು ಬುಲ್‌ಟ್ರಾಲ್ ಮೀನುಗಾರಿಕೆ, ಅವೈಜ್ಞಾನಿಕವಾಗಿ ಪಚ್ಚಿಲೆ ಮೀನುಗಾರಿಕೆ, ಚೌರಿ ಮತ್ತು ಪ್ಲಾಸ್ಟಿಕ್ ಬಳಸಿ ಅನಧಿಕೃತವಾಗಿ ಕಪ್ಪೆ ಬಂಡಸನ್ನು ಹಿಡಿಯುವುದನ್ನು ನಿಷೇಧಿಸಲಾಗಿದೆ.
ನಿಷೇಧಿತ ಪದ್ಧತಿಗಳಲ್ಲಿ ಮೀನುಗಾರಿಕೆ ಮಾಡುವುದು ಕಂಡು ಬಂದಲ್ಲಿ ಸಂಬಂಧಿಸಿದ ಮೀನುಗಾರಿಕಾ ದೋಣಿಗಳ ಪರವಾನಿಗೆ ರದ್ದು ಪಡಿಸಲಾ ಗುವುದು. ಅಂತಹರಿಗೆ ನೀಡುವ ಕರರಹಿತ ಡೀಸೆಲ್ ಸೌಲಭ್ಯವನ್ನು ತಡೆ ಹಿಡಿಯಲಾಗುವುದು. ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ 1986ರಂತೆ ಸಂಬಂಧಿಸಿದ ದೋಣಿಗಳು ಹಿಡಿದ ಮೀನಿನ ಐದುಪಟ್ಟು ದರದಲ್ಲಿ ದಂಡ ವಸೂಲು ಮಾಡಲಾಗುವುದು ಎಂದು ಮೀನುಗಾರಿಕೆ ಜಂಟಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.