×
Ad

ಡಾ. ದಿಶಾ ಅಡಿಗಗೆ ಎಂ.ಡಿ. ಮಕ್ಕಳ ತಜ್ಞ ಪರೀಕ್ಷೆಯಲ್ಲಿ ನಾಲ್ಕನೆ ರ‍್ಯಾಂಕ್

Update: 2021-10-05 20:08 IST

ಮಂಗಳೂರು : ಮೂಡುಬಿದಿರೆಯ ಪ್ರಸಿದ್ಧ ತಜ್ಞ ವೈದರುಗಳಾದ ಡಾ. ಗುರುಪ್ರಸಾದ ಅಡಿಗ ಮತ್ತು ಡಾ. ಮಮತಾ ಗುರುಪ್ರಸಾದ ದಂಪತಿಯ ಪುತ್ರಿ ಡಾ. ದಿಶಾ ಅಡಿಗ ಇವರು ಮಹಾರಾಷ್ಟ್ರ ರಾಜ್ಯ ಆರೋಗ್ಯ ವಿಶ್ವವಿದ್ಯಾನಿಲಯ ಸೆಪ್ಟಂಬರ್ 2021 ರಲ್ಲಿ ನಡೆಸಿದ ಎಂ.ಡಿ. ಮಕ್ಕಳ ತಜ್ಞ ಪರೀಕ್ಷೆಯಲ್ಲಿ ನಾಲ್ಕನೆಯ ರ‍್ಯಾಂಕ್ ಗಳಿಸಿರುತ್ತಾರೆ.

ಇವರು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಮುಗಿಸಿದ್ದು, ಎಂ.ಡಿ.ಯನ್ನು ಸೆತ್ ಜಿ.ಎಸ್ ಮೆಡಿಕಲ್ ಕಾಲೇಜು (ಕೆ.ಇ.ಎಮ್ ಆಸ್ಪತ್ರೆ ) ಮುಂಬೈನಲ್ಲಿ ಮಾಡಿರುತ್ತಾರೆ. ನೀಟ್ ಪಿ.ಜಿ.ಯಲ್ಲಿ ರಾಷ್ಟ್ರ ಮಟ್ಟದಲ್ಲಿ 400ನೇ ರ‍್ಯಾಂಕ್ ಗಳಿಸಿರುವ ಇವರು ಆಳ್ವಾಸ್ ಪದವಿಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News