ಅಕ್ರಮ ಕಡವೆ ಮಾಂಸ ಸಾಗಾಟ: ಇಬ್ಬರು ಆರೋಪಿಗಳ ಬಂಧನ

Update: 2021-10-05 14:59 GMT

ಬೈಂದೂರು, ಅ.5: ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಮದ್ದೋಡಿ ಸಮೀಪದ ಕುಂಜಳ್ಳಿಗೆ ಹೋಗುವ ರಸ್ತೆಯಲ್ಲಿ ಕಡವೆ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಯಡ್ತರೆ ನಿವಾಸಿ ಮಮ್ಮಿಶಾಹ್ ಪೈಝಲ್ ಹಾಗೂ ಖರುರಿ ನಿಝಾಮುದ್ದೀನ್ ಬಂಧಿತ ಆರೋಪಿಗಳು. ಈ ಕೃತ್ಯದಲ್ಲಿ ಭಾಗಿಯಾಗಿರುವ ಕುಂಜಳ್ಳಿಯ ಹೆರಿಯಣ್ಣ ಶೆಟ್ಟಿ, ಎಂ.ಆರ್. ಪ್ರವೀಣ್ ಶೆಟ್ಟಿ ಹಾಗೂ ಇತರರು ತಲೆಮರೆಸಿ ಕೊಂಡಿದ್ದಾರೆ. ಬಂಧಿತರಿಂದ ಎರಡು ದ್ವಿಚಕ್ರ ವಾಹನ, ಕಡವೆ ಮಾಂಸ ಹಾಗೂ ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ವಿರುದ್ಧ 1972ರ ವನ್ಯಜೀವಿ ಸಂರಕ್ಷಣಾ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಜಿ. ಮಾರ್ಗ ದರ್ಶನದಲ್ಲಿ ಬೈಂದೂರು ವಲಯ ಅರಣ್ಯಾಧಿಕಾರಿ ಟಿ.ಕಿರಣ್ ಬಾಬು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಬಂಗಾರಪ್ಪ ಆಚಾರಿ, ಸಚಿನ ನಾಯ್ಕ, ರವಿರಾಜ ಬಿ., ಅರಣ್ಯ ರಕ್ಷಕರುಗಳಾದ ಶಂಕರಪ್ಪ ಡಿ.ಎಲ್., ಮಂಜುನಾಥ ನಾಯ್ಕ, ಮಹೇಶ ಎಸ್. ಮಲ್ಲಾಪದ, ಅಂಬ್ರೇಶ, ಶಾರವಾರಿ, ರವಿ ಜಟ್ಟಿ ಮುರ್ರೆ, ಮಂಜದುನಾಥ್, ರಾಮಪ್ಪ, ವಿನಾಯಕ, ಮಲ್ಲಿಕಾರ್ಜುನ, ವಾಹನ ಚಾಲಕ ಪ್ರಕಾಶ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News