ಕಾಡೂರು ಘನ ಸಂಪನ್ಮೂಲ ಘಟಕಕ್ಕೆ ನಿಯೋಗ ಭೇಟಿ
Update: 2021-10-05 20:34 IST
ಬ್ರಹ್ಮಾವರ, ಅ.5: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಹಾಗೂ ತಾಲೂಕಿನ ವಿವಿಧ ಪಂಚಾಯತ್‌ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಜಲಜೀವನ್ ಮಿಷನ್ ಯೋಜನೆಯ ಸಂಯೋಜಕರು ಇಂದು ಬ್ರಹ್ಮಾವರ ತಾಲೂಕಿನ ಕಾಡೂರು ಗ್ರಾಮ ಪಂಚಾಯತ್ ಘನ ಸಂಪನ್ಮೂಲ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ಕಾಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪಾಂಡುರಂಗ ಶೆಟ್ಟಿ, ಉಪಾಧ್ಯಕ್ಷೆ ಅಮಿತಾ ರಾಜೇಶ್, ಗ್ರಾಮ ಪಂಚಾಯತ್ ಸದಸ್ಯರು, ಶಿವಮೊಗ್ಗ ಜಿಲ್ಲಾ ಪಂಚಾಯತ್ ಜಲಜೀವನ್ ಮಿಷನ್ ಸಂಯೋಜಕ ಜಲಾಧರ್ ಉಪಸ್ಥಿತರಿ ದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ. ಮಾಹಿತಿ ನೀಡಿದರು.