×
Ad

ಅ.6ರಿಂದ ಉಡುಪಿ ಜಿಲ್ಲೆಯಲ್ಲಿ ಇಂಧನ, ಶಿಕ್ಷಣ ಸಚಿವರ ಪ್ರವಾಸ

Update: 2021-10-05 20:37 IST

ಉಡುಪಿ, ಅ.5: ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹಾಗೂ ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಸಕಾಲ ಸಚಿವ ಬಿ.ಸಿ.ನಾಗೇಶ್ ಅ.6ರಿಂದ ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಸಚಿವ ಸುನಿಲ್ ಕುಮಾರ್ ಅವರು ಅ.6ರಿಂದ ಬೆಳಗ್ಗೆ 9 ಗಂಟೆಗೆ ಶೀಂಬ್ರದ ಕೃಷ್ಣಾಂಗಾರಕ ಸ್ಥಾನ ಘಟ್ಟದಲ್ಲಿ ಸ್ವರ್ಣಾ ನದಿಗೆ ಬಾಗಿನ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, 10:30ಕ್ಕೆ ಬೈಲೂರು-ಎರ್ಲಪಾಡಿ-ಹಿರ್ಗಾನ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವರು. 11:30ಕ್ಕೆ ಕಾರ್ಕಳದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಗಳೂರಿಗೆ ತೆರಳುವರು.

ಬಿ.ಸಿ.ನಾಗೇಶ್: ಶಿಕ್ಷಣ ಸಚಿವರು ಬೆಳಗ್ಗೆ 11 ಕ್ಕೆ ಬೈಂದೂರು ತಾಲೂಕು ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ಹೊಸ ಕಟ್ಟಡವನ್ನು ಉದ್ಘಾಟಿಸಿ, ಅಪರಾಹ್ನ 12:00ಕ್ಕೆ ಹೆಮ್ಮಾಡಿಯ ಜುವೆಲ್‌ಪಾರ್ಕ್‌ನಲ್ಲಿ ಶಿಕ್ಷಕರ ಕಾರ್ಯಕ್ರಮದಲ್ಲಿ ಭಾಗವಹಿ ಕೊಲ್ಲೂರಿನಲ್ಲಿ ವಾಸ್ತವ್ಯ ಮಾಡುವರು. ಅ.7 ರಂದು ಉತ್ತರ ಕನ್ನಡದಲ್ಲಿ ಕಾರ್ಯಕ್ರಮ. ಅ.8ರ 8ರ ಬೆಳಗ್ಗೆ 9 ಕ್ಕೆ ಕೊಲ್ಲೂರಿನಿಂದ ಉಡುಪಿಗೆ. 11 ರಿಂದ ಉಡುಪಿಯಲ್ಲಿ ವಿವಿಧ ಕಾರ್ಯಕ್ರಮ. ಸಂಜೆ 6:30ಕ್ಕೆ ವುಂಗಳೂರಿಗೆ ಪ್ರಯಾಣ ಬೆಳೆಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News