×
Ad

ಶೇ.100 ಮೊದಲ ಡೋಸ್ ಲಸಿಕೆ ನೀಡಿದ ಎರಡನೇ ಜಿಲ್ಲೆ ಉಡುಪಿ: ಸಚಿವ ಡಾ.ಸುಧಾಕರ್ ಟ್ವೀಟ್

Update: 2021-10-05 21:11 IST

ಉಡುಪಿ, ಅ.5: ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ್ ಇಂದು ಸಂಜೆ ಟ್ವೀಟ್ ಮಾಡಿ, ಉಡುಪಿ ಜಿಲ್ಲೆಯು ಕೋವಿಡ್-19 ಲಸಿಕೆ ವಿತರಣೆಯ ಮೊದಲ ಡೋಸ್‌ನ್ನು ಶೇ.100 ಮಂದಿಗೆ ಯಶಸ್ವಿಯಾಗಿ ವಿತರಿಸಿದ ರಾಜ್ಯದ ಎರಡನೇ ಜಿಲ್ಲೆಯಾಗಿದೆ ಎಂದು ಪ್ರಕಟಿಸುವ ಮೂಲಕ ಇದಕ್ಕೆ ಕಾರಣರಾದ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಅಭಿನಂದಿಸಿದರು.

ಜಿಲ್ಲೆಯಲ್ಲಿ 18 ವರ್ಷ ಮೇಲಿನ ಒಟ್ಟು 9,01,568 ಮಂದಿಗೆ ಮೊದಲ ಡೋಸ್‌ನ್ನು ವಿತರಿಸುವ ಗುರಿ ಇದ್ದು, ಇಂದು ಸಂಜೆಯವರೆಗೆ ಒಟ್ಟು 9,08,139 ಮಂದಿಗೆ ಮೊದಲ ಡೋಸ್ ಲಸಿಕೆ ವಿತರಿಸಿ ಗುರಿಮೀರಿದ ಸಾಧನೆ ಮಾಡಲಾಗಿದೆ ಎಂದು ಅವರು ಟ್ವಿಟ್‌ನಲ್ಲಿ ತಿಳಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆ ತನ್ನ ವ್ಯಾಪ್ತಿಯ ಶೇ.100ರಷ್ಟು ಮಂದಿಗೆ ಮೊದಲ ಡೋಸ್ ವಿತರಿಸಿದ ರಾಜ್ಯದ ಮೊದಲ ಜಿಲ್ಲೆಯಾಗಿದೆ. ಇಂದು ಮಾಡಿದ ಮತ್ತೊಂದು ಟ್ವೀಟ್ ನಲ್ಲಿ ಡಾ.ಸುಧಾಕರ್, ಬೆಂಗಳೂರು ಸಿಟಿಯ ಶೇ.50ರಷ್ಟು ಯುವಜನಕ್ಕೆ ಎರಡೂ ಡೋಸ್ ಲಸಿಕೆಗಳನ್ನು ವಿತರಿಸಲಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News