ಎಸ್ಸೆಸ್ಸೆಫ್ : ಗುಜರಾತ್‌ನಲ್ಲಿ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವ
ಹೊಸದಿಲ್ಲಿ : ಸುನ್ನಿ ಸ್ಟೂಡೆಂಟ್ ಫೆಡರೇಷನ್ ಇದರ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವ 2022 ಫೆ.4, 5, 6 ರಂದು ಗುಜರಾತಿನ ಕಛ್ ನಲ್ಲಿ ನಡೆಸುವುದಾಗಿ ಘೋಷಣೆ ಮಾಡಲಾಯಿತು.
ಹೊಸದಿಲ್ಲಿಯಲ್ಲಿ ನಡೆದ ಎಸ್ಸೆಸ್ಸೆಫ್ ರಾಷ್ಟ್ರೀಯ ನಾಯಕರ ಸಭೆಯಲ್ಲಿ ಎಸ್ಸೆಸ್ಸೆಫ್ ನಿಕಟ ಪೂರ್ವ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಮೌಲಾನಾ ಶೌಕತ್ ನಈಮಿ ಕಾಶ್ಮೀರ್ ದಿನಾಂಕ ಹಾಗೂ ಸ್ಥಳವನ್ನು ಘೋಷಣೆ ಮಾಡಿದರು.
ವಿದ್ಯಾರ್ಥಿ ಪ್ರತಿಭೆಗಳಲ್ಲಿ ಅಡಗಿರುವ ಸುಪ್ತಶಕ್ತಿಯನ್ನು ಪೋಷಿಸಿ ಬೆಳೆಸಲು ಕೇರಳ ಹಾಗೂ ಕರ್ನಾಟಕದಲ್ಲಿ ಸಾಹಿತ್ಯೋತ್ಸವ, ಪ್ರತಿಭೋತ್ಸವ ಎಂಬ ಹೆಸರಿನಲ್ಲಿ ಯುನಿಟ್ ನಿಂದ ರಾಜ್ಯ ಮಟ್ಟದ ವರೆಗೆ ಸ್ಪರ್ಧೆಗಳು ಈಗಾಗಲೇ ನಡೆಯುತ್ತಿದೆ. ಈಗ ರಾಷ್ಟ್ರ ಮಟ್ಟದಲ್ಲಿ ಸಂಘಟನೆ ಬಲಿಷ್ಠ ಗೊಳ್ಳುತ್ತಿದ್ದು ಸಾಹಿತ್ಯೋತ್ಸವವನ್ನು ಬಹುತೇಕ ಎಲ್ಲಾ ರಾಜ್ಯಗಳಲ್ಲೂ ನಡೆಸಲಾಗುತ್ತದೆ. ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದ ಪ್ರತಿಭೆಗಳು ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ರಾಷ್ಟ್ರಾಧ್ಯಕ್ಷ ಮೌಲಾನಾ ಫಾರೂಖ್ ನಈಮಿ ಕೇರಳ ಹೇಳಿದರು.
ಸಭೆಯಲ್ಲಿ ನೌಶಾದ್ ಆಲಂ ಮಿಸ್ಬಾಹಿ ಬಡಿಸ್ಸಾ, ಝುಹೈರುದ್ದೀನ್ ನೂರಾನಿ ಕೋಲ್ಕತಾ, ಮುಈನುದ್ದೀನ್ ತ್ರಿಪುರ, ಖಮರುದ್ದೀನ್ ಸಖಾಫಿ ಬಿಹಾರ್, ಖಾಝಿ ವಸೀಮುದ್ದೀನ್ ಮಹಾರಾಷ್ಟ್ರ, ಶರೀಫ್ ಮಾಸ್ಟರ್ ಬೆಂಗಳೂರು, ಹಾಫಿಝ್ ಸುಫ್ಯಾನ್ ಸಖಾಫಿ, ಯಾಕೂಬ್ ಮಾಸ್ಟರ್ ಕೊಡಗು, ಸಫ್ವಾನ್ ಚಿಕ್ಕಮಗಳೂರು ಹಾಗೂ ಇನ್ನಿತರ ಪ್ರಮುಖರು ಭಾಗವಹಿಸಿದ್ದರು.