×
Ad

ಸ್ಫೋಟ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ 12 ವರ್ಷ ಜೈಲಿನಲ್ಲಿದ್ದ ವ್ಯಕ್ತಿಗೆ ಜಾಮೀನು ನೀಡಿದ ಹೈಕೋರ್ಟ್

Update: 2021-10-06 17:55 IST

ಹೊಸದಿಲ್ಲಿ: ಬಾಂಬ್ ಸ್ಫೋಟ ಪ್ರಕರಣದಲ್ಲಿ ವಿಚಾರಣಾದೀನ ಕೈದಿಯಾಗಿ 12 ವರ್ಷಗಳಿಗಿಂತಲೂ ಹೆಚ್ಚು ಕಾಲ ಬಂಧನದಲ್ಲಿದ್ದ ಯುಎಪಿಎ ಆರೋಪಿಗೆ ದಿಲ್ಲಿ ಹೈಕೋರ್ಟ್ ಜಾಮೀನು ನೀಡಿದೆ. ನ್ಯಾಯಾಲಯಗಳು ಸಾವಿಗೆ ಕಾರಣ ಕಂಡುಹಿಡಿಯುವ ಕೆಲಸ ಮಾಡಬಾರದು. ಆದರೆ ಕಾನೂನು ಅಥವಾ ಸಾಂವಿಧಾನಿಕ ಹಕ್ಕುಗಳು  ಅಳಿಸಿಹಾಕುವ ಮುನ್ನ ಅವುಗಳನ್ನು ಉಳಿಸುವ ವೈದ್ಯರಂತೆ ವರ್ತಿಸಬೇಕು ಎಂದು ಹೈಕೋರ್ಟ್ ಬುಧವಾರ ಹೇಳಿದೆ.

ದಿಲ್ಲಿಯಲ್ಲಿ 2008ರಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟದಲ್ಲಿ ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ತಯಾರಿಸಲು ಲಕ್ನೋದಿಂದ ದಿಲ್ಲಿಗೆ ಸೈಕಲ್ ಬಾಲ್-ಬೇರಿಂಗ್‌ಗಳನ್ನು ಹೊತ್ತೊಯ್ದಿದ್ದಾನೆ ಎಂಬ ಆರೋಪವನ್ನು ಎದುರಿಸುತ್ತಿರುವ ಮುಹಮ್ಮದ್ ಹಕೀಮ್ ಗೆ ನ್ಯಾಯಾಧೀಶರಾದ ಸಿದ್ಧಾರ್ಥ್ ಮೃದುಲ್ ಹಾಗೂ  ನ್ಯಾಯಮೂರ್ತಿ ಅನುಪ್ ಜೆ. ಭಂಭನಿ ಅವರ ನ್ಯಾಯಪೀಠವು ಜಾಮೀನು ನೀಡಿದೆ.

ತ್ವರಿತ ವಿಚಾರಣೆಯ ತನ್ನ ಹಕ್ಕನ್ನು ಉಲ್ಲಂಘಿಸಲಾಗಿದೆ ಹಾಗೂ  ವಿಚಾರಣೆ ಬಾಕಿ ಇರುವಾಗ ನಿಯಮಿತ ಜಾಮೀನಿನ ಮೇಲೆ ಬಿಡುಗಡೆಗೆ ಅರ್ಹನಿದ್ದೇನೆಂಬ ನೆಲೆಯಲ್ಲಿ  ಎಂದು ಮುಹಮ್ಮದ್ ಹಕೀಮ್  ಜಾಮೀನು ಕೋರಿದ್ದರು.

2009 ರಿಂದ ಬಂಧನದಲ್ಲಿರುವ ಆರೋಪಿ, ಭಾರತೀಯ ದಂಡ ಸಂಹಿತೆ, 1860, ಸ್ಫೋಟಕ ಪದಾರ್ಥಗಳ ಕಾಯಿದೆ, 1908 ಮತ್ತು ಕಾನೂನುಬಾಹಿರ ಚಟುವಟಿಕೆಗಳ (ನಿಬಂಧನೆ) ಕಾಯಿದೆ, 1967 ಹಲವು ನಿಬಂಧನೆಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣದಲ್ಲಿ ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು  ಹೈಕೋರ್ಟ್ ಅನ್ನು ಸಂಪರ್ಕಿಸಿದರು.

ವಿಚಾರಣೆ ಪೂರ್ಣಗೊಂಡ ನಂತರ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ಊಹಿಸಿದರೂ, ಆರೋಪಿ ಹಕೀಮ್  ಈಗಾಗಲೇ ಅನುಭವಿಸಬಹುದಾದ ಅರ್ಧಕ್ಕಿಂತ ಹೆಚ್ಚು ಶಿಕ್ಷೆಯನ್ನು ಅನುಭವಿಸಿದ್ದಾನೆ.

"ಅರ್ಜಿದಾರರು 12 ವರ್ಷಗಳಿಗಿಂತಲೂ ಹೆಚ್ಚು ಕಾಲ ಕಸ್ಟಡಿಯಲ್ಲಿ ಕಳೆದಿದ್ದಾರೆ. ಕಳೆದ 12 ವರ್ಷಗಳಲ್ಲಿ 256 ಸಾಕ್ಷಿಗಳ ವಿಚಾರಣೆಯನ್ನು ನಡೆಸಲಾಗಿದೆ ಆದರೆ 60 ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಇನ್ನೂ ವಿಚಾರಣೆಗೆ ಒಳಪಡಿಸಲಾಗಿದೆ "ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News