×
Ad

ಬೆಂಜಮಿನ್ ಲಿಸ್ಟ್, ಡೇವಿಡ್ ಮೆಕ್‍ಮಿಲ್ಲನ್ ಗೆ ರಸಾಯನಶಾಸ್ತ್ರ ವಿಭಾಗದ ನೋಬೆಲ್ ಪ್ರಶಸ್ತಿ

Update: 2021-10-06 19:04 IST

ಸ್ಟಾಕ್‍ಹೋಂ: ಜರ್ಮನಿಯ  ಬೆಂಜಮಿನ್ ಲಿಸ್ಟ್ ಹಾಗೂ ಸ್ಕಾಟ್‍ಲ್ಯಾಂಡ್ ಮೂಲದ ಡೇವಿಡ್ ಮೆಕ್‍ಮಿಲ್ಲನ್ ಅವರಿಗೆ 2021  ಸಾಲಿನ ರಸಾಯನಶಾಸ್ತ್ರದ ನೋಬೆಲ್ ಪ್ರಶಸ್ತಿ ಒಲಿದಿದೆ. ಎಸಿಮೆಟ್ರಿಕ್ ಆರ್ಗನೊಕೆಟಲಿಸಿಸ್  ಅಭಿವೃದ್ಧಿಯಲ್ಲಿ ಹಾಗೂ ಮಾಲಿಕ್ಯೂಲ್ ಬಿಲ್ಡಿಂಗ್‍ಗಾಗಿ ಹೊಸ ನವೀನ ಸಾಧನ ಅಭಿವೃದ್ಧಿಪಡಿಸಿದ್ದಕ್ಕಾಗಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರಕಿದೆ.

ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸಾಯನ್ಸಸ್ ಕೊಡಮಾಡುವ ಈ ಪ್ರಶಸ್ತಿಯ ವಿಜೇತರಿಗೆ 10 ಮಿಲಿಯನ್ ಸ್ವೀಡಿಷ್ ಕ್ರೌನ್‍ಗಳು (1.14 ಮಿಲಿಯನ್ ಡಾಲರ್) ನಗದು ಬಹುಮಾನ ದೊರಕಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News