×
Ad

ರೈತರ ಹೋರಾಟವನ್ನು ಗೌರವಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾದ ಕೋಲ್ಕತಾದ ದುರ್ಗಾಪೂಜೆಯ ಪೆಂಡಾಲ್

Update: 2021-10-06 21:09 IST

ಕೋಲ್ಕತ್ತಾ: ಉತ್ತರ ಕೊಲ್ಕತ್ತಾದ ಸ್ಥಳೀಯ ಕ್ಲಬ್ ವೊಂದು ಸುಮಾರು ಒಂದು ವರ್ಷದಿಂದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟವನ್ನು ಗೌರವಿಸುವ ಮೂಲಕ ದುರ್ಗಾಪೂಜೆಯನ್ನು ಆಚರಿಸಲು ಮುಂದಾಗಿದೆ. ಪೆಂಡಾಲ್‌ನಲ್ಲಿನ ಬೃಹತ್ ಕಲಾಕೃತಿಗಳು ರೈತರ ಸಂಕಷ್ಟವನ್ನು ಚಿತ್ರಿಸುತ್ತವೆ. ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರವನ್ನು ತೀವ್ರವಾಗಿ ಟೀಕಿಸಲಾಗಿದೆ. ನಾವು ರೈತರೊಂದಿಗೆ ಇದ್ದೇವೆ ಎಂಬ ಸಂದೇಶದೊಂದಿಗೆ ಲಖಿಂಪುರ ಹಿಂಸಾಚಾರ ಘಟನೆ ಉಲ್ಲೇಖಿಸಲಾಗಿದೆ. 

ಡಮ್‌ಡಮ್ ಪಾರ್ಕ್ ಭಾರತ ಚಕ್ರ ಪೆಂಡಾಲ್‌ನ ಪ್ರವೇಶದ್ವಾರದಲ್ಲಿ ರೈತರು ಉಳುಮೆಗೆ ಬಳಸುವ ಟ್ರ್ಯಾಕ್ಟರ್‌ನ ಬೃಹತ್ ಪ್ರತಿರೂಪವನ್ನು ಹೊಂದಿದೆ.

ನೆಲದ ಮೇಲೆ ನೂರಾರು ಸ್ಯಾಂಡಲ್‌ಗಳು ಪೊಲೀಸರ ಕ್ರಮದಿಂದಾಗಿ ಪ್ರತಿಭಟನಾಕಾರರು ಕಾಲ್ತುಳಿತದಲ್ಲಿ ತಮ್ಮ ಚಪ್ಪಲಿಗಳನ್ನು ಕಳೆದುಕೊಂಡಿರುವ ಆಂದೋಲನದ ದೃಶ್ಯಗಳನ್ನು ಸಂಕೇತಿಸುತ್ತವೆ.

ಥೀಮ್ ಅನ್ನು ಪರಿಕಲ್ಪನೆ ಮಾಡಿದ ಕಲಾವಿದ ಅನಿರ್ಬನ್ ದಾಸ್, ಸುದ್ದಿಸಂಸ್ಥೆ ಪಿಟಿಐ ಜೊತೆಗೆ ಮಾತನಾಡುತ್ತಾ,"ಆಂದೋಲನದ ಸಮಯದಲ್ಲಿ ಸಾವನ್ನಪ್ಪಿದ ರೈತರ ಹೆಸರನ್ನು ದೊಡ್ಡ ರೆಕ್ಕೆಗಳನ್ನು ಹೊಂದಿರುವ ದೈತ್ಯ ಟ್ರಾಕ್ಟರ್ ಮೇಲೆ ಕಾಗದದ ಚೀಟಿಗಳಲ್ಲಿ ಬರೆಯಲಾಗಿದೆ. ರೆಕ್ಕೆಗಳು ಬಂಧನದಿಂದ ಮುಕ್ತವಾಗಬೇಕೆಂಬ ಅವರ ಇಚ್ಛೆಯನ್ನು ಸಂಕೇತಿಸುತ್ತದೆ"ಎಂದು ಅವರು ವಿವರಿಸಿದರು.

ಪೆಂಡಾಲ್ ನಲ್ಲಿ ಇಂಗ್ಲಿಷ್ ನಲ್ಲಿ ಬರೆದಿರುವ ''ನಾವು ರೈತರು, ಭಯೋತ್ಪಾದಕರಲ್ಲ'ಎಂದು ಬರೆದಿರುವ ಪೋಸ್ಟರ್ ಎಲ್ಲರ ಗಮನ ಸೆಳೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News