×
Ad

ಮಡಗಾಂವ್ ಜಂಕ್ಷನ್‌ನಲ್ಲಿ ಅಭಿವೃದ್ಧಿ ಕಾಮಗಾರಿ: ಕೊಂಕಣ ಮಾರ್ಗದ ಕೆಲ ರೈಲುಗಳ ಸಂಚಾರ ರದ್ದು

Update: 2021-10-06 21:13 IST

ಉಡುಪಿ, ಅ.6: ದಕ್ಷಿಣ-ಪಶ್ಚಿಮ ರೈಲ್ವೆಯ ಹುಬ್ಬಳ್ಳಿ ವಿಭಾಗ ಮಡಗಾಂವ್ ಜಂಕ್ಷನ್‌ನಲ್ಲಿ ರೈಲ್ವೆ ಮೂಲಭೂತ ಸೌಕರ್ಯಗಳ ಉನ್ನತೀಕರಣದಡಿ ರೈಲ್ವೆ ಹಳಿ ದ್ವಿಪಥ ಕಾಮಗಾರಿಯನ್ನು ಮಡಗಾಂವ್ ಜಂಕ್ಷನ್‌ನಲ್ಲಿ ನಡೆಸಲಿದ್ದು, ಇದರಿಂದ ಕೊಂಕಣ ರೈಲು ಮಾರ್ಗವೂ ಸೇರಿದಂತೆ ಹಲವು ರೈಲುಗಳ ಸಂಚಾರವನ್ನು ರದ್ದು ಪಡಿಸಲಾಗಿದೆ.

ಇದರಂತೆ ರೈಲು ನಂ.06602 ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ದೈನಂದಿನ ರೈಲಿನ ಅ.10ರ ಸಂಚಾರವನ್ನು ರದ್ದುಪಡಿಸಲಾಗಿದೆ. ಅದೇ ರೀತಿ ರೈಲು ನಂ.06601 ಮಡಗಾಂವ್ ಜಂಕ್ಷನ್- ಮಂಗಳೂರು ಜಂಕ್ಷನ್ ದೈನಂದಿನ ರೈಲಿನ ಅ.10ರ ಸಂಚಾರವನ್ನು ರದ್ದುಪಡಿಸಲಾಗಿದೆ.

ಅ.9ರಂದು ಹೊರಡುವ ರೈಲು ನಂ. 01197 ಪುಣೆ-ಎರ್ನಾಕುಲಂ ಜಂಕ್ಷನ್ ಸಾಪ್ತಾಹಿಕ ರೈಲಿನ ಸಂಚಾರ ರದ್ದುಗೊಂಡಿದ್ದರೆ, ರೈಲು ನಂ.01198 ಎರ್ನಾಕುಲಂ ಜಂಕ್ಷನ್-ಪುಣೆ ರೈಲಿನ ಅ.11ರ ಸಂಚಾರವನ್ನು ಸಹ ರದ್ದು ಪಡಿಸಲಾಗಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News