ದಾಳಿಯ ರಾತ್ರಿ ಎನ್ಸಿಬಿ ಕಚೇರಿಗೆ ಬಿಜೆಪಿಯ ಮನೀಶ್ ಹಾಗೂ ಗೊಸಾವಿ ಬರುವ ವಿಡಿಯೋ ಬಹಿರಂಗ

Update: 2021-10-07 07:35 GMT

ಮುಂಬೈ: ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತಿತರರ ಬಂಧನಕ್ಕೆ ಕಾರಣವಾದ ಕ್ರೂಸ್ ಹಡಗೊಂದರ ಮೇಲೆ ನಡೆದ ಎನ್‍ಸಿಬಿ ದಾಳಿ ಕುರಿತಂತೆ ಬುಧವಾರವಷ್ಟೇ ಪತ್ರಿಕಾಗೋಷ್ಠಿ ನಡೆಸಿ ಸ್ಫೋಟಕ ಮಾಹಿತಿ ಹೊರಗೆಡಹಿದ್ದ ಎನ್‍ಸಿಪಿ ನಾಯಕ ಹಾಗೂ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಇಂದು ತಮ್ಮ ಹೇಳಿಕೆಗೆ ಪೂರಕವಾಗಿ  ಒಂದು ವೀಡಿಯೋ ಟ್ವೀಟ್ ಮಾಡಿದ್ದಾರೆ.

ಎನ್‍ಸಿಬಿ ದಾಳಿ ವೇಳೆ ಖಾಸಗಿ ಡಿಟೆಕ್ಟಿವ್ ಎನ್ನಲಾದ ಕೆ ಪಿ ಗೋಸಯಿ ಹಾಗೂ ಬಿಜೆಪಿ ಪದಾಧಿಕಾರಿ ಮನೀಶ್ ಭಾನುಶಾಲಿ ಇದ್ದ ಕುರಿತು ಹಲವಾರು ಪ್ರಶ್ನೆಗಳನ್ನು ಬುಧವಾರ ಎತ್ತಿದ್ದ ಮಲಿಕ್ ಅವರು ಇಂದು ಟ್ವೀಟ್ ಮಾಡಿರುವ ವೀಡಿಯೋದಲ್ಲಿ, ದಾಳಿ ನಡೆದ ರಾತ್ರಿಯಂದು ಬಿಳಿ ಬಣ್ಣದ ಕಾರು ಒಂದರಲ್ಲಿ ಆಗಮಿಸಿ ಎನ್‍ಸಿಬಿ ಕಚೇರಿಗೆ ಇಬ್ಬರೂ ತೆರಳುತ್ತಿರುವುದು ಕಾಣಿಸುತ್ತದೆ.

ದಾಳಿ ನಡೆದ ನಂತರ ಎನ್‍ಸಿಬಿ ಹಿರಿಯ ಅಧಿಕಾರಿ ಸಮೀರ್ ವಾಂಖೇಡೆ ಅವರು 8ರಿಂದ 10 ಜನರನ್ನು ಬಂಧಿಸಲಾಗಿದೆ ಎಂದು ಹೇಳಿರುವುದು ಹಾಗೂ ವಾಸ್ತವವಾಗಿ 8 ಮಂದಿಯನ್ನು ಬಂಧಿಸಿರುವುದನ್ನೂ ಎತ್ತಿ ತೋರಿಸಿದ ಮಲಿಕ್. "ಎಷ್ಟು ಮಂದಿಯನ್ನು ಬಂಧಿಸಲಾಗಿದೆ ಎಂಬ ಬಗ್ಗೆ ಅವರಿಗೆ ಖಾತ್ರಿಯಿರಲಿಲ್ಲವೇ? ಇನ್ನೂ ಇಬ್ಬರನ್ನು ಬಂಧಿಸುವ ಉದ್ದೇಶವಿತ್ತೇ?" ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News