ಅ.10ರಂದು ಪೆರ್ಣಂಕಿಲ ಶಂಕರ್ ಪ್ರತಿಷ್ಠಾನದ ಉದ್ಘಾಟನೆ
ಉಡುಪಿ, ಅ.7: ಗ್ರಾಮೀಣ ಭಾಗದಲ್ಲಿನ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ರೀತಿ ನೆರವು ನೀಡುವ ನಿಟ್ಟಿನಲ್ಲಿ ಸ್ಥಾಪಿಸಿ ರುವ ಪೆರ್ಣಂಕಿಲ ಶಂಕರ್ ಪ್ರತಿಷ್ಠಾನದ ಉದ್ಘಾಟನೆಯು ಅ.10ರಂದು ಬೆಳಗ್ಗೆ 11ಗಂಟೆಗೆ ಪೆರ್ಣಂಕಿಲ ಗ್ರಾಮದ ಪಡುಬೆಟ್ಟುವಿನಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಟ್ರಸ್ಟಿ ಪೆರ್ಣಂಕಿಲ ಶ್ರೀಶ ನಾಯಕ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಷ್ಠಾನವನ್ನು ಕೊಪ್ಪ ಗೌರಿಗದ್ದೆ ಶ್ರೀ ವಿನಯ್ ಗೂರುಜಿ ಉದ್ಘಾಟಿಸಲಿ ರುವರು. ಪೇಜಾವರ ಮಠ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಕುಮಾರ್ ಕಟೀಲ್ ಭಾಗವಹಿಸಲಿರುವರು ಎಂದು ಮಾಹಿತಿ ನೀಡಿದರು.
ಪ್ರತಿಷ್ಠಾನದ ಮೂಲಕ ನೆಲ-ಜಲ ಪರ್ಯಾವರಣದ ಪರಿಶುದ್ಧತೆ ಮತ್ತು ಗೋರಕ್ಷಣೆಗೆ ಪರಿಣಾಮಕಾರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸಾಮಾಜಿಕ ಸಂಘಟನೆ ಮತ್ತು ಯುವ ಪೀಳಿಗೆಯಲ್ಲಿ ಸಂಸ್ಕಾರವನ್ನು ರೂಪಿಸುವ ನಿಟ್ಟಿನಲ್ಲಿ ಮಾಹಿತಿ ಶಿಬಿರ, ಧಾರ್ಮಿಕ ಸತ್ಸಂಗಗಳು, ಗ್ರಾಮವಿಕಾಸದ ಪರಿಕಲ್ಪನೆ ಯಲ್ಲಿ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಕಾರ್ಯಾಗಾರವನ್ನು ಏರ್ಪಡಿ ಸುವ ಗುರಿ ಹೊಂದಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಸ್ವೀಕಾರ್ ನಾಯಕ್, ಸುವರ್ಧನ್ ನಾಯಕ್, ಪ್ರತಾಪ್ ಶೆಟ್ಟಿ ಉಪಸ್ಥಿತರಿದ್ದರು.