ಅ.19ರಂದು ಮೀಲಾದುನ್ನಬಿ: ಖಾಝಿ ಮಾಣಿ ಉಸ್ತಾದ್ ಘೋಷಣೆ
Update: 2021-10-07 19:28 IST
ಮಂಗಳೂರು: ಇಂದು (ಅ.7) ರಬೀಉಲ್ ಅವ್ವಲ್ ತಿಂಗಳ ಚಂದ್ರದರ್ಶನವಾಗಿರುವುದು ಖಚಿತವಾಗಿರುವುದರಿಂದ ಅ.19ರಂದು ಮೀಲಾದುನ್ನಬಿ ಆಚರಿಸಲಾಗುವುದು ಎಂದು ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸಂಯುಕ್ತ ಜಮಾಅತ್ ಹಾಗೂ ದ.ಕ.ಜಿಲ್ಲೆಯ ವಿವಿಧ ಮೊಹಲ್ಲಾಗಳ ಖಾಝಿ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಖಾಝಿ ಸಯ್ಯಿದ್ ಕೂರತ್ ತಂಙಳ್ ಅವರೂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.