ಐಟಿಐ ಕೋರ್ಸ್, ಡಿಪ್ಲೋಮಾ ಪ್ರವೇಶ ಅವಧಿ ವಿಸ್ತರಣೆ
ಉಡುಪಿ, ಅ.7: ಉಡುಪಿಯ ಸರಕಾರಿ ಐಟಿಐ ಸಂಸ್ಥೆಯಲ್ಲಿ 2 ವರ್ಷ ಅವಧಿಯ ಐಟಿಐ ಕೋರ್ಸ್‌ಗಳಲ್ಲಿ ಖಾಲಿ ಉಳಿದಿರುವ ಕೆಲವು ಸ್ಥಾನಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಅ.11ರವರೆಗೆ ವಿಸ್ತರಿಸಲಾಗಿದೆ.
ಪ್ರಸಕ್ತ ಸಾಲಿನಿಂದ ಟಾಟಾ ಸಂಸ್ಥೆಯ ಸಹಯೋಗದೊಂದಿಗೆ ಉನ್ನತೀಕರಣ ಗೊಂಡ ರಾಜ್ಯ ವೃತ್ತಿ ಪರಿಷತ್ ಸಂಯೋಜನೆ ಪಡೆದ ಬ್ಯಾಟರಿ ಎಲೆಕ್ಟ್ರಿಕಲ್ ವೆಹಿಕಲ್ (ಆಟೋ ಮೊಬೈಲ್) ಮತ್ತು ಅಡ್ವಾನ್ಸ್ಡ್ ಮ್ಯಾನಿಫಾಕ್ಚರಿಂಗ್ ಎಂಬ 2 ವರ್ಷ ಅವಧಿಯ ಹೊಸ ವೃತ್ತಿಗಳು ಪ್ರಾರಂಭವಾಗಲಿದ್ದು, ಈ ಕೋರ್ಸ್‌ಗಳ ಪ್ರವೇಶಕ್ಕಾಗಿ 10ನೇ ತರಗತಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಸೂಕ್ತ ದಾಖಲಾತಿಗಳೊಂದಿಗೆ ಸಂಸ್ಥೆಗೆ ಹಾಜರಾಗಿ ಅ.21ರೊಳಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9740541554 ಮತ್ತು 9738439619 ನ್ನು ಸಂಪರ್ಕಿಸುವಂತೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಡಿಪ್ಲೋಮಾ ಪ್ರವೇಶ ಅವಧಿ ವಿಸ್ತರಣೆ
ಉಡುಪಿ ಜಿಲ್ಲೆಯ ಕಾಪು ಸರಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಎಸೆಸೆಲ್ಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಂದ ಪ್ರಥಮ ವರ್ಷದ ಡಿಪ್ಲೊಮಾ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಅ.19ರವರೆಗೆ ವಿಸ್ತರಿಸಲಾಗಿದೆ.
ಶೇ.35ರಷ್ಟು ಅಂಕ ಪಡೆದಿರುವ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸ ಬಹುದಾಗಿದ್ದು, ಆಟೋಮೆಷನ್ ಆಂಡ್ ರೊಬೋಟಿಕ್ಸ್, ಕ್ಲೌಡ್ ಕಂಪ್ಯೂಟಿಂಗ್ ಆಂಡ್ ಬಿಗ್ ಡೇಟಾ ಎಂಬ ನೂತನ ವೃತ್ತಿಪರ ಕೋರ್ಸ್‌ಗಳಿಗೆ, ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸರಕಾರಿ ಪಾಲಿಟೆಕ್ನಿಕ್ ಕಾಪು ಸಂಸ್ಥೆಯ ವಿಶೇಷಾ ಧಿಕಾರಿಗಳ ದೂ.ಸಂ: 9480773870/9945759720ನ್ನು ಸಂಪರ್ಕಿ ಸುವಂತೆ ಪ್ರಕಟಣೆ ತಿಳಿಸಿದೆ.