2000 ರೂ. ನೋಟಿನಿಂದ ಗಾಂಧಿ ಫೋಟೊ ತೆಗೆಯಲು ಪ್ರಧಾನಿ ಮೋದಿಗೆ ಹೇಳಿದ ಕಾಂಗ್ರೆಸ್ ಶಾಸಕ: ಕಾರಣವೇನು ಗೊತ್ತೇ?

Update: 2021-10-08 10:52 GMT

ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಮತ್ತು ಬಾರ್‌ಗಳಲ್ಲಿ ಬಳಸುತ್ತಿರುವುದರಿಂದ 500 ಮತ್ತು 2,000 ಕರೆನ್ಸಿ ನೋಟುಗಳಲ್ಲಿರುವ ಗಾಂಧೀಜಿಯ ಭಾವಚಿತ್ರವನ್ನು ತೆರವುಗೊಳಿಸಬೇಕು ಎಂದು ಕಾಂಗ್ರೆಸ್‌ ಪಕ್ಷದ ಶಾಸಕರೋರ್ವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ ಎಂದು indianexpress.com ವರದಿ ಮಾಡಿದೆ.

ರಾಜಸ್ಥಾನದ ಭ್ರಷ್ಟಾಚಾರದ ಪ್ರಕರಣಗಳತ್ತ ಗಮನ ಸೆಳೆಯುತ್ತಾ, ರಾಜ್ಯದ ಆಡಳಿತ ಪಕ್ಷದ ಶಾಸಕರಾದ ಭರತ್ ಸಿಂಗ್ ಕುಂದನ್ಪುರ್, "ಜನವರಿ 2019 ಮತ್ತು ಡಿಸೆಂಬರ್ 31, 2020 ರ ನಡುವೆ ಒಟ್ಟು 616 ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ. ದಿನಕ್ಕೆ ಸರಾಸರಿ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಮಹಾತ್ಮಾ ಗಾಂಧಿಯವರ 152ನೇ ಜನ್ಮ ದಿನಾಚರಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಕಳುಹಿಸಿದ ಪತ್ರದಲ್ಲಿ, ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳ ಮೇಲೆ ಮಹಾತ್ಮಾ ದಾಂಧಿವರ ಭಾವಚಿತ್ರದ ಬದಲು ಅವರ ಕನ್ನಡದ ಚಿತ್ರವನ್ನು ಬಳಸುವಂತೆ ಸಲಹೆ ನೀಡಿದ್ದಾರೆ. ಗಾಂಧೀಜಿ ತಮ್ಮ ಜೀವನದುದ್ದಕ್ಕೂ ಬಡವರ ಪರವಾಗಿ ಕಾರ್ಯ ನಿರ್ವಹಿಸಿರುವ ಕಾರಣ ಕೇವಲ 5, 10, 50, 100 ಮತ್ತು 200 ಮುಖಬೆಲೆಯ ನೋಟುಗಳ ಮೇಲೆ ಮಾತ್ರ ಅವರ ಭಾವಚಿತ್ರ ಇಟ್ಟುಕೊಳ್ಳಬೇಕು ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News