×
Ad

ಉಡುಪಿ; ಒಂದನೇ ತರಗತಿಯಿಂದ ಶಾಲೆ ತೆರೆಯುವಂತೆ ಶಿಕ್ಷಣ ಸಚಿವರನ್ನು ಒತ್ತಾಯಿಸಿದ ಬಾಲಕಿ !

Update: 2021-10-08 19:38 IST

ಉಡುಪಿ, ಅ.8: ಉಡುಪಿ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಗೆ ಶುಕ್ರವಾರ ಭೇಟಿ ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ವಿದ್ಯಾರ್ಥಿನಿಯೊಬ್ಬಳು ಒಂದನೇ ತರಗತಿಯಿಂದ ಶಾಲೆಯನ್ನು ತಕ್ಷಣವೇ ಆರಂಭಿಸುವಂತೆ ಒತ್ತಾಯಿಸಿದ ಪ್ರಸಂಗ ನಡೆಯಿತು.

ಸಚಿವರು ಶಾಲೆಯನ್ನು ವೀಕ್ಷಿಸಿ ಹೊರಡಲು ಸಿದ್ಧರಾದಾಗ ತಾಯಿ ಜೊತೆ ಶಾಲೆಗೆ ಬಂದಿದ್ದ ನಾಲ್ಕನೇ ತರಗತಿಯ ವಿದ್ಯಾರ್ಥಿನಿ, ಉಡುಪಿ ಕನ್ನರ್ಪಾಡಿಯ ಸಂಪ್ರೀತಿ, ಒಂದನೇ ತರಗತಿಯನ್ನು ಕೂಡಲೇ ಆರಂಭಿಸುವಂತೆ ಸಚಿವರನ್ನು ವಿನಂತಿಸಿಕೊಂಡಳು.

‘ಯಾಕೆ, ಆನ್‌ಲೈನ್ ತರಗತಿ ಬೇಡವೇ’ ಎಂದು ಸಚಿವರ ಪ್ರಶ್ನೆಗೆ ಉತ್ತರಿಸಿದ ಬಾಲಕಿ, ಆನ್‌ಲೈನ್‌ನಲ್ಲಿ ನನಗೆ ಅರ್ಥ ಆಗುವುದಿಲ್ಲ. ಮನೆಯಲ್ಲಿ ಒಬ್ಬಳೇ ಕುಳಿತು ಕಲಿಯಲು ಕಷ್ಟವಾಗುತ್ತದೆ. ಶಾಲೆಯಲ್ಲಿ ಫ್ರೆಂಡ್ಸ್ ಜೊತೆ ಸೇರಿ ಕಲಿಯಬಹುದು. ಆದುದರಿಂದ ಆದಷ್ಟು ಬೇಗ ಶಾಲೆ ಆರಂಭಿಸಿ’ ಎಂದು ವಿನಂತಿಸಿಕೊಂಡಳು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ತಕ್ಷಣವೇ ಶಾಲೆಯನ್ನು ಆರಂಭಿಸುತ್ತೇ ಎಂದು ಭರವಸೆ ನೀಡಿ ಹೊರಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News