ಪ್ರಚೋದನಕಾರಿ ಭಾಷಣ; ಚೈತ್ರಾ ಕುಂದಾಪುರ ವಿರುದ್ಧ ಪ್ರಕರಣ ದಾಖಲು: ಕಮಿಷನರ್ ಶಶಿಕುಮಾರ್
ಮಂಗಳೂರು, ಅ.8: ಸುರತ್ಕಲ್‌ನಲ್ಲಿ ಬಜರಂಗದಳ ಮತ್ತು ದುರ್ಗಾ ವಾಹಿನಿ ಸುರತ್ಕಲ್ ಪ್ರಖಂಡದಿಂದ ಅ.4ರಂದು ನಡೆದ ಜನಜಾಗೃತಿಯ ಸಭೆಯಲ್ಲಿ ಚೈತ್ರಾ ಕುಂದಾಪುರ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಖಾಸಗಿ ವ್ಯಕ್ತಿಗಳು ಸಹಿತ ಸಂಘಟನೆಗಳು ದೂರು ನೀಡಿದ್ದು, ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಸಭೆಯಲ್ಲಿ ಚೈತ್ರ ಕುಂದಾಪುರ, ‘ಬ್ಯಾರಿಗಳು ಮೀನು ಮಾರುವವರು, ಇವರಿಗೆ ನಮ್ಮ ಅನ್ನ ತಿಂದು ಜೀವಿಸಲು ಎಷ್ಟು ಅಹಂಕಾರ, ನಾವು ಬಜರಂಗದಳ, ಮನಸ್ಸು ಮಾಡಿದರೆ ಎರಡು ದಿನದಲ್ಲಿ ಎಲ್ಲಾ ಮುಸಲ್ಮಾನರ ಹೆಣ್ಣು ಮಕ್ಕಳನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡುತ್ತೇವೆ. ಮನೆಯಿಂದ ಅವರಿಗೆ ಬುರ್ಖಾ ತೆಗೆಸಿ ಕುಂಕುಮ ಇಟ್ಟು ಮತಾಂತರ ಮಾಡುತ್ತೇವೆ’ ಎಂಬ ಮಾತುಗಳನ್ನು ಆಡಿರುವುದಾಗಿ ದೂರುಗಳು ಬಂದಿದ್ದವು. ಈ ಕುರಿತು ಕೆಲವು ಖಾಸಗಿ ವ್ಯಕ್ತಿಗಳು ಸೇರಿದಂತೆ ವಿವಿಧ ಸಂಘಟನೆಗಳು ದೂರು ನೀಡಿದ್ದರು. ಕಾನೂನು ತಜ್ಞರ ಅಭಿಪ್ರಾಯ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.