×
Ad

ವಿನಾಶಕಾರಿ ಮೀನುಗಾರಿಕೆ ನಡೆಸಿದರೆ ಇಲಾಖೆ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ

Update: 2021-10-08 20:06 IST

ಉಡುಪಿ, ಅ.8: ಕರ್ನಾಟಕ ರಾಜ್ಯ ಸರಕಾರವು ಕಡಲ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯ ಹಿತದೃಷ್ಟಿಯಿಂದ ಕರಾವಳಿಯಾದ್ಯಂತ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ 1986ರನ್ವಯ ಹಾನಿಕಾರಕ ಮೀನುಗಾರಿಕಾ ಪದ್ಧತಿಗಳನ್ನು ನಿಷೇದಿಸಿದೆ.

ಉಡುಪಿ ಕರಾವಳಿಯಲ್ಲಿ ಬುಲ್‌ಟ್ರಾಲ್, ಬೆಳಕು ಮೀನುಗಾರಿಕೆ, ಚೌರಿ, ಚಿಂದಿ, ಕೊಳೆಯುವ ವಸ್ತುಗಳು ಹಾಗೂ ಇನ್ನಿತರ ಸಮುದ್ರ ಮಾಲಿನ್ಯವಾಗುವ ವಸ್ತುಗಳನ್ನು ಉಪಯೋಗಿಸಿ ಅಸಾಂಪ್ರದಾಯಿಕ ರೀತಿಯಲ್ಲಿ ಕಪ್ಪೆ ಬಂಡಾಸ್ ಮೀನು ಹಿಡಿಯು ವುದು, ಪಚ್ಚಿಲೆ ತೆಗೆಯುವುದು ಇತ್ಯಾದಿ ಅವೈಜ್ಞಾನಿಕ ಮತ್ತು ವಿನಾಶಕಾರಿ ಮೀನುಗಾರಿಕೆ ಪದ್ಧತಿಗಳನ್ನು ನಿಷೇಧಿಸಲಾಗಿದೆ.

ಇಂತಹ ನಿಷೇಧಿತ ಮೀನುಗಾರಿಕೆ ಪದ್ಧತಿ ಮತ್ತು ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ 1986ನ್ನು ಉಲ್ಲಂಸಿ ಮೀನುಗಾರಿಕೆ ನಡೆಸುತ್ತಿರುವುದು ಕಂಡುಬಂದಲ್ಲಿ, ಗಂಭೀರವಾಗಿ ಪರಿಗಣಿಸಿ ಅಂತಹ ಬೋಟುಗಳ ಮೇಲೆ ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ 1986ರನ್ವಯ ಮೀನುಗಾರಿಕಾ ಪರವಾನಗಿ ರದ್ದು ಪಡಿಸುವುದು, ಕರರಹಿತ ಡೀಸಿಲ್ ಸೌಲಭ್ಯವನ್ನು ತಡೆ ಹಿಡಿಯುವುದು, ಹಿಡಿದ ಮೀನಿನ 5 ಪಟ್ಟು ದರದ ದಂಡ ವಿಧಿಸುವುದು ಮುಂತಾದ ಕಟ್ಟುನಿಟ್ಟಿನ ಕ್ರಮಗಳನ್ನು ಮೀನುಗಾರಿಕೆ ಇಲಾಖಾ ವತಿಯಿಂದ ಜರುಗಿಸಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News