ಹೆಬ್ರಿಯಲ್ಲಿ ನೂತನ ಗೋಶಾಲೆ : ಸಚಿವ ಸುನೀಲ್‌ ಕುಮಾರ್ 5 ಲಕ್ಷ ರೂ.ದೇಣಿಗೆ ಘೋಷಣೆ

Update: 2021-10-08 15:04 GMT

ಹೆಬ್ರಿ, ಅ.8: ಈಗಾಗಲೇ ಜಿಲ್ಲೆಯಲ್ಲಿ ಮೂರು ಗೋಶಾಲೆಗಳನ್ನು ನಡೆಸುತ್ತಿರುವ ಪೇಜಾವರ ಮಠದ ಶ್ರೀವಿಶ್ವಪ್ರಸ್ನ ತೀರ್ಥರ ನೇತೃತ್ವದಲ್ಲಿ ಶ್ರೀವಿಶ್ವೇಶಕೃಷ್ಣ ಗೋಸೇವಾ ಟ್ರಸ್ಟ್ ವತಿಯಿಂದ ಹೆಬ್ರಿಯ ಗಿಲ್ಲಾಳಿಯ ಏಳು ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗುವ ನೂತನ ಗೋಶಾಲೆಗೆ ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್‌ ಕುಮಾರ್ ಉಪಸ್ಥಿತಿಯಲ್ಲಿ ಇಂದು ಶಿಲಾನ್ಯಾಸ ನೆರವೇರಿತು.

ಶ್ರೀಮಠದ ಭಕ್ತರಾಗಿರುವ ಪದ್ಮನಾಭ ಆಚಾರ್ಯರು ಗಿಲ್ಲಾಳಿಯಲ್ಲಿರುವ ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಏಳು ಎಕರೆ ಭೂಮಿಯನ್ನು ಗೋಶಾಲೆಯ ಸ್ಥಾಪನೆಯ ಉದ್ದೇಶಕ್ಕಾಗಿ ಟ್ರಸ್ಟ್‌ಗೆ ದಾನವಾಗಿ ನೀಡಿದ್ದಾರೆ.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಚಿವ ಸುನೀಲ್ ಕುಮಾರ್, ಶ್ರೀಗಳ ಗೋರಕ್ಷಣಾ ಕಾರ್ಯ ಅತ್ಯಂತ ಸ್ತುತ್ಯರ್ಹವಾಗಿದ್ದು, ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಾಪಿಸುತ್ತಿರುವ ಎರಡನೇ ಗೋಶಾಲೆಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದರಲ್ಲದೇ, ನೂತನ ಗೋಶಾಲೆಗೆ ಆರಂಭಿಕ ದೇಣಿಗೆಯಾಗಿ ಐದು ಲಕ್ಷ ರೂ. ನೀಡುವುದಾಗಿ ಘೋಷಿಸಿದರು.

ಜಿಲ್ಲೆಯ ನೀಲಾವರ, ಕೊಡವೂರು ಹಾಗೂ ಕಬ್ಬಿನಾಲೆಗಳಲ್ಲಿ ಈಗಾಗಲೇ ಗೋಶಾಲೆಗಳನ್ನು ನಡೆಸುತ್ತಿರುವ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶಿಲಾನ್ಯಾಸ ನೆರವೇರಿಸಿ ಸಂದೇಶ ನೀಡಿ, ಇನ್ನೂ ಮೂರು ಗೋಶಾಲೆ ಪ್ರಾರಂಭಿಸುವ ಕನಸಿದೆ ಎಂದರು.

ಜಿಲ್ಲೆಯ ನೀಲಾವರ, ಕೊಡವೂರು ಹಾಗೂ ಕಬ್ಬಿನಾಲೆಗಳಲ್ಲಿ ಈಗಾಗಲೇ ಗೋಶಾಲೆಗಳನ್ನು ನಡೆಸುತ್ತಿರುವ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶಿಲಾನ್ಯಾಸ ನೆರವೇರಿಸಿ ಸಂದೇಶ ನೀಡಿ, ಇನ್ನೂ ಮೂರು ಗೋಶಾಲೆ ಪ್ರಾರಂಭಿಸುವ ಕನಸಿದೆ ಎಂದರು. ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಗೋಶಾಲೆಯಲ್ಲಿ ಅತಿಥಿ ಗೃಹ ನಿರ್ಮಾಣಕ್ಕೆ ಪ್ರಾಧಿಕಾರದಿಂದ ಅನುದಾನ ನೀಡುವುದಾಗಿ ತಿಳಿಸಿದರು.

ಸೆಲ್ಕೊ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗುರುಪ್ರಸಾದ್ ಶೆಟ್ಟಿ, ಟ್ರಸ್ಟ್‌ನ ಅಧ್ಯಕ್ಷ ಪದ್ಮನಾಭ ಆಚಾರ್ಯ, ವಿಶ್ವಸ್ಥರಾದ ಗುರುದಾಸ್ ಶೆಣೈ, ಬಾಲಕೃಷ್ಣ ನಾಯಕ್, ಲಕ್ಷ್ಮೀನಾರಾಯಣ ನಾಯಕ್, ಲಕ್ಷ್ಮಣ ಭಟ್, ರವಿ ರಾವ್, ಪುಟ್ಟಣ್ಣ ಭಟ್, ಲಕ್ಷ್ಮೀನಾರಾಯಣ ಜೋಯಿಸ್, ದಿನೇಶ್ ಪೈ, ಗಣೇಶ್ ಕಿಣಿ, ಭಾರ್ಗವಿ ಐತಾಳ್, ಶ್ರೀಕಾಂತ ಭಟ್, ಐತು ಕುಲಾಲ್, ಗಣೇಶ್ ಕುಮಾರ್, ಮುಂತಾದ ವರು ಉಪಸ್ಥಿತರಿದ್ದರು.

ಪದ್ಮನಾಭ ಆಚಾರ್ಯ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ ಗುರುದಾಸ್ ಶೆಣೈ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News