×
Ad

ಸುಡುಮದ್ದು ಪರವಾನಿಗೆ; ಷರತ್ತು ಪಾಲನೆಗೆ ಪೊಲೀಸ್ ಆಯುಕ್ತರ ಸೂಚನೆ

Update: 2021-10-08 21:49 IST

ಮಂಗಳೂರು, ಅ.8: ದೀಪಾವಳಿ ಮತ್ತು ತುಳಸಿ ಪೂಜೆ ಹಬ್ಬಗಳ ಸಂದರ್ಭದಲ್ಲಿ ನ.2ರಿಂದ 5 ಮತ್ತು ನ.15ರಿಂದ ನ.16ರವರೆಗೆ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸುಡುಮದ್ದು ಮಾರಾಟ ಮಾಡಲು ಅಪೇಕ್ಷಿಸುವ ಅರ್ಜಿದಾರರು ತಾತ್ಕಾಲಿಕ ಸುಡುಮದ್ದು ಪರವಾನಿಗೆಯನ್ನು ಪಡೆಯಲು ಸಾಕಷ್ಟು ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಪಡೆಯಲು ಅ.16 ಕೊನೆಯ ದಿನ. ಅರ್ಜಿ ನಮೂನೆಯನ್ನು ಪೊಲೀಸ್ ಆಯುಕ್ತರ ಕಚೇರಿಯಿಂದಲೇ ಪಡೆದು 200 ರೂ.ನ್ನು ಪಾವತಿಸಿ ಪಡೆದುಕೊಳ್ಳಬೇಕು ಎಂದು ಪೊಲೀಸ್ ಆಯುಕ್ತರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News