ಪ್ರವಾಸೋಧ್ಯಮ ಜಗತ್ತನ್ನು ಆಕರ್ಷಿಸುವ ಕ್ಷೇತ್ರ : ಸಚಿವ ಸುನಿಲ್ ಕುಮಾರ್
ಪಡುಬಿದ್ರಿ: ಕರಾವಳಿಯ ಪ್ರದೇಶವನ್ನು ಪ್ರವಾಸೋದ್ಯಮ ದೃಷಿಯಿಂದ ಎಲ್ಲಾ ಸರ್ಕಾರಗಳು ಮಾನ್ಯತೆ ಕೊಡುತ್ತಾ ಬಂದಿವೆ, ಪ್ರವಾಸೋದ್ಯಮ ಜಗತ್ತನ್ನು ಆಕರ್ಷಿಸುವ ಕ್ಷೇತ್ರವಾಗಿದ್ದು, ಮನರಂಜನೆ ಅಧ್ಯಯನಶೀಲವಾಗಿ ನೂರಾರು ಪ್ರದೇಶವಾಗಿ ಮಾರ್ಪಟ್ಟಿವೆ ಎಂದು ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಪರಿಸರ ಮಂತ್ರಾಲಯ ಅರಣ್ಯ ಮತ್ತು ಹವಾಮಾನ ಬದಲಾವಣೆ ಭಾರತ ಸರ್ಕಾರ. ಸೊಸೈಟಿ ಆಫ್ ಇಂಟಗ್ರೆಟ್ ಕೋಸ್ಟಲ್ ಮ್ಯನೇಜ್‍ಮೆಂಟ್‍ಹಾಗೂ ಬೀಟ್ ಮ್ಯಾನೇಜ್‍ಮೆಂಟ್ ಸಹಯೋಗದಲ್ಲಿ ಅಂತರಾಷ್ಟ್ರೀಯ ಬ್ಯೂ ಫ್ಲ್ಯಾಗ್ ಮಾನ್ಯತೆ ಪಡೆದಿರುವ ಪಡುಬಿದ್ರಿ ಎಂಡ್ ಪಾಯಿಂಟ್ ಕಡಲತೀರದಲ್ಲಿ ಶುಕ್ರವಾರ ಆಯೋಜಿಸಿದ್ದ ಭಾರತದ 75ನೇ ಆಝಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಪರಿಸರವನ್ನು ನಾವೇ ಸ್ವಚ್ಛ ಮಾಡಿಕೊಳ್ಳಬೇಕಾದದ್ದು ನಮ್ಮ ಆದ್ಯತೆಯಾಗಬೇಕು. ಯಾವುದೇ ಪ್ರದೇಶಕ್ಕೆ ಹೋದಲ್ಲಿ ಅಲ್ಲಿನ ಸ್ವಚ್ಛತೆಗೆ ಆದ್ಯತೆಯೊಂದಿಗೆ ಪರಿಸರ ಸಮತೋಲನವನ್ನೂ ಕಾಯ್ದುಕೊಳ್ಳಬೇಕು. ಅಂತರಾಷ್ಟ್ರೀಯ ಮನ್ನಣೆಗೊಳಗಾಗಿ ರುವ ಬ್ಲೂ ಫ್ಲ್ಯಾಗ್ ಬೀಚ್ ಪ್ರದೇಶವನ್ನು ಪರಿಸರ ಸ್ವಚ್ಛ ಸುಂದರವಾಗಿ ನಿರ್ವಹಣೆ ಮಾಡಿದಲ್ಲಿ ದೇಶ ವಿದೇಶದಿಂದ ಜನ ಆಗಮಿಸುತ್ತಾರೆ. ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆಯಲ್ಲಿ ಕಲ್ಪಿಸಲು ಜಿಲ್ಲಾಡಳಿತ ಬದ್ಧವಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಅಂಗವಾಗಿ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ ಪದ್ರ, ಸೀಕಾಂ ಪರಿಸರ ಅಭಿಯಂತರ ಗರೀನಾ ಶರ್ಮ, ಅಸೋಸಿಯೇಶನ್ ಆಫ್ ಕೋಸ್ಟಲ್ ಟೂರಿಸಂ ಅಧ್ಯಕ್ಷ ಮನೋಹರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಶಿಕಾಂತ ಪಡುಬಿದ್ರಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ನೀತಾಗುರುರಾಜ್, ವಿಜೇತ್ ಕಾರ್ಯಕ್ರಮ ಉಪಸ್ಥಿತರಿದ್ದರು.
ಸಮುದ್ರ ತೀರದಲ್ಲಿ ಪ್ರವಾಸಿಗರು ಅಲ್ಲಲ್ಲಿ ಸೆದಿರುವ ನಿರುಪಯುಕ್ತ ಬಾಟಲ್‍ಗಳನ್ನು ಬ್ಲೂಫ್ಲ್ಯಾಗ್ ಬೀಚ್ ಸಿಬ್ಬಂದಿಗಳು ಅದನ್ನು ತಂದು ಅದಕ್ಕೆ ಕಲಾಕೃತಿ ರಚಿಸುವ ಮೂಲಕ ಗಮನಸೆಳೆದಿದೆ.
ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ ಸ್ವಾಗತಿಸಿದರು. ಮಂಗಳೂರು ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ದಿನೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಜಿಲ್ಲಾ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು.