×
Ad

ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ ದಾಖಲೆ ನಿರ್ಮಿಸಿದ ಸೂರ್ಯ ಪುರೋಹಿತ್ ಗೆ ಸನ್ಮಾನ

Update: 2021-10-08 22:28 IST

ಕಾರ್ಕಳ: ಕಾರ್ಕಳ ಶ್ರೀನಿವಾಸ ಸೇವಾ ಟ್ರಸ್ಟ್ ಹಾಗೂ ಸುಮೇಧ ಫ್ಯಾಶನ್ ಇನ್‌ಸ್ಟಿಟ್ಯೂಟ್‌ ಆಫ್‌ ಪ್ಯಾಶನ್ ಡಿಸೈನಿಂಗ್ ಇದರ ಆಶ್ರಯದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಕೇವಲ 3 ನಿಮಿಷದಲ್ಲಿ ಸೂರ್ಯೋದಯದ ಚಿತ್ರ ಬಿಡಿಸಿ ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ ದಾಖಲೆ ನಿರ್ಮಿಸಿದ ಸೂರ್ಯ ಪುರೋಹಿತ್ ಗೆ ಸನ್ಮಾನ ಕಾರ್ಯಕ್ರಮವು ಕಾರ್ಕಳ ದ ಎಸ್ ಜೆ ಆರ್ಕೇಡ್ ನ ಸುಮೇಧ ಫ್ಯಾಶನ್ ಇನ್‌ಸ್ಟಿಟ್ಯೂಟ್‌ ಆಫ್‌ ಪ್ಯಾಶನ್ ಡಿಸೈನಿಂಗ್ ಕಾಲೇಜಿನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸೂರ್ಯ ಪುರೋಹಿತ್ ಅವರು ನಾವು ಇಂದು ಕಷ್ಟಪಟ್ಟರೆ ಮುಂದೆ ಸುಖವಾಗಿರಬಹುದು ಸಾಧಿಸುವ  ಛಲವೊಂದಿದ್ದರೆ ನಮ್ಮ ಜೀವನದಲ್ಲಿ ಖಂಡಿತವಾಗಿಯೂ ಮುಂದೆ ಬರಬಹುದು ಎಂದರು.

ಸಂಸ್ಥೆಯಲ್ಲಿ ಕೋರ್ಸ್ ಮುಗಿಸಿ ತೆರಳುತ್ತಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಮುಖ್ಯಸ್ಥರಾದ ಸಾಧನ ಜಿ ಆಶ್ರಿತ್ ನಮ್ಮ ಸಂಸ್ಥೆಯಲ್ಲಿ ಕಲಿತ ಮಕ್ಕಳು ನಮ್ಮನ್ನು ಎಂದು ಎಂದಿಗೂ  ಬಿಟ್ಟು ಹೋಗುವುದಿಲ್ಲ ಸದಾ ನಮ್ಮ ಜೊತೆಯಲ್ಲಿ ಇರುತ್ತಾರೆ ಅವರು ಬೇರೆ ಕಂಪನಿಗಳಲ್ಲಿ ಕೆಲಸಕ್ಕೆ ಹೋದರೂ ನಾವು ಅವರ ಬಗ್ಗೆ ವಿಚಾರಿಸುತ್ತೇವೆ ಮತ್ತು ಅವರ ಸಂಪರ್ಕದಲ್ಲಿರುತ್ತವೆ. ವಿದ್ಯಾರ್ಥಿಗಳು ಫ್ಯಾಷನ್ಡಿಸೈನರ್ ಆಗಿ ಹೊಸ ಆಯಾಮ ಕಂಡು ಹಿಡಿಯಬೇಕು ಎಂದರು.

ಸಂಸ್ಥೆಯ ಉಪನ್ಯಾಸಕಿಯಾದ ಸಹನಾ ಮಾತನಾಡಿ, ಶುಭ ಹಾರೈಸಿದರು.

ಈ ಸಂದರ್ಭ ವಿದ್ಯಾಭ್ಯಾಸ ಮುಗಿಸಿದ ಪೂಜಾ, ಅಶ್ವಿನಿ ಮತ್ತು ನಿಧಿಶ್ರೀ ತಮ್ಮ ಅನಿಸಿಕೆಯಲ್ಲಿ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News