×
Ad

ಎರಡು ದಿನಗಳಲ್ಲಿ ಕಲ್ಲಿದ್ದಲು ಪೂರೈಕೆಯಾಗದಿದ್ದರೆ ದಿಲ್ಲಿಯಲ್ಲಿ ವಿದ್ಯುತ್ ಕೊರತೆ ಕಾಡಲಿದೆ:ಸತ್ಯೇಂದ್ರ ಜೈನ್

Update: 2021-10-09 18:27 IST

ಹೊಸದಿಲ್ಲಿ: ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸರಬರಾಜಿನಲ್ಲಿ ಸುಧಾರಣೆಯಾಗದಿದ್ದರೆ ಮುಂದಿನ ಎರಡು ದಿನಗಳಲ್ಲಿ ರಾಷ್ಟ್ರರಾಜಧಾನಿಯಲ್ಲಿ ವಿದ್ಯುತ್ ಕೊರತೆ ಕಾಡಲಿದೆ ಎಂದು ದಿಲ್ಲಿ ಸಚಿವರು ಇಂದು ಎಚ್ಚರಿಸಿದ್ದಾರೆ.

ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲ್ಲು ಕೊರತೆಯಿಂದ ದೀರ್ಘ ಸಮಯ ವಿದ್ಯುತ್ ಕಡಿತ ಮಾಡಬೇಕಾಗುತ್ತದೆ ಎಂಬ ಕುರಿತಾಗಿ ತಮಿಳುನಾಡು ಹಾಗೂ ಒಡಿಶಾ ರಾಜ್ಯಗಳು ಈಗಾಗಲೇ ಕಳವಳ ವ್ಯಕ್ತಪಡಿಸಿದ್ದು, ಇದೀಗ ದಿಲ್ಲಿ ಹೊಸ ಸೇರ್ಪಡೆಯಾಗಿದೆ.

"ರೈಲ್ವೆ ವೇಗನ್ ಗಳನ್ನು ವ್ಯವಸ್ಥೆ ಮಾಡಿ ಹಾಗೂ ಆದಷ್ಟು ಬೇಗನೆ ಸ್ಥಾವರಗಳಿಗೆ ಕಲ್ಲಿದ್ದಲುಗಳನ್ನು ಸಾಗಿಸಬೇಕೆಂದು ಕೇಂದ್ರ ಸರಕಾರಕ್ಕೆ ನಾವು ಮನವಿ ಮಾಡುತ್ತೇವೆ. ಎಲ್ಲ ಸ್ಥಾವರಗಳು ಈಗ ಕೇವಲ 55 ಶೇ. ಸಾಮರ್ಥ್ಯದೊಂದಿಗೆ ಕೆಲಸ ಮಾಡುತ್ತಿವೆ ಕೋವಿಡ್-19 ಎರಡನೇ ಅಲೆಯ ವೇಳೆ ವೈದ್ಯಕೀಯ ಆಮ್ಲಜನಕ ಕೊರತೆಯಾದಂತೆ ಕಲ್ಲಿದ್ದಲು ಬಿಕ್ಕಟ್ಟು ಕೂಡ ಮಾನವ ನಿರ್ಮಿತ ಸಮಸ್ಯೆಯಾಗಿ ಕಾಣುತ್ತಿದೆ. ರಾಜಕೀಯ  ನಡೆಯುತ್ತಿದೆ. ನೀವು ಬಿಕ್ಕಟ್ಟನ್ನು ಸೃಷ್ಟಿಸಿದರೆ, ಇದನ್ನು ಪರಿಹರಿಸಲು ಭಾರೀ ಕೆಲಸ ಮಾಡಬೇಕಾಗುತ್ತದೆ'' ಎಂದು ಇಂಧನ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News