ಬ್ಯಾರಿ ಪ್ರಬಂಧ ವಾಚನ, ಗಾಯನ, ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

Update: 2021-10-09 15:28 GMT

ಮಂಗಳೂರು, ಅ.9: ಬ್ಯಾರಿ ಭಾಷಾ ದಿನಾಚರಣೆಯ ಅಂಗವಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಆಯೋಜಿಸಿದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪ್ರಬಂಧ ವಾಚನ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಮುಹಮ್ಮದ್ ಸಲೀಂ (ಪ್ರಥಮ), ಮುಹಮ್ಮದ್ ಸಾಹಿದ್ ಮೋಂಟುಗೋಳಿ (ದ್ವಿತೀಯ) ಮುಹಮ್ಮದ್ ತೌಶೀಫ್ (ತೃತೀಯ) ಮಹಿಳೆಯರ ವಿಭಾಗದಲ್ಲಿ ಶಾಹೀದಾ ಮಂಗಳೂರು (ಪ್ರಥಮ), ಹಫೀಝಾ ಫಾತಿಮಾ (ದ್ವಿತೀಯ), ಖದೀಜಾ ಅಶ್ಯಮ್ (ತೃತೀಯ)ರಿಗೆ ಬಹುಮಾನ ನೀಡಲಾಯಿತು.

ಬ್ಯಾರಿ ಗಾಯನ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಕಕ್ಕಿಂಜೆ (ಪ್ರಥಮ), ತಾಜುದ್ದೀನ್ ಅಮ್ಮುಂಜೆ(ದ್ವಿತೀಯ), ಮುಹಮ್ಮದ್ ಹಫೀಲ್, ನಿಯ್ಯಿ ಬಂಟ್ವಾಳ (ತೃತೀಯ) ಅವರಿಗೆ ಬಹುಮಾನ ನೀಡಲಾಯಿತು.

ಕಾರ್ಯಕ್ರಮದ ದಿನದಂದು ಸಭಾಂಗಣದಲ್ಲಿ ನಡೆದ ಬ್ಯಾರಿ ಭಾಷಣ ಸ್ಪರ್ಧೆಯಲ್ಲಿ ಮುಸ್ತಫಾ (ಪ್ರಥಮ), ಹಬೀಬ್ ರಹ್ಮಾನ್ (ದ್ವಿತೀಯ). ಬಿ.ಎ. ಮುಹಮ್ಮದ್, ಮುಹಮ್ಮದ್ ಸೌರೀಜ್(ತೃತೀಯ) ಅವರಿಗೆ ಬಹುಮಾನ ನೀಡಲಾಯಿತು.

ಪ್ರಬಂಧ ವಾಚನ, ಗಾಯನ, ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಸಮಾಧಾನಕಾರ ಬಹುಮಾನ ನೀಡಲಾಯಿತು.
ತೀರ್ಪುಗಾರರಾಗಿ ಅಬ್ದುಲ್ ಅಝೀಝ್ ಝುಹ್ರಿ ಪುಣಚ ಮತ್ತು ಅಶೀರುದ್ದೀನ್ ಸಾರ್ತಬೈಲ್ ಸಹಕರಿಸಿದ್ದರು ಎಂದು ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News